ಡಿಸಿಸಿ ಬ್ಯಾಂಕ್ ಚುನಾವಣೆಗೆ ಮಾಮನಿ ನಮ್ಮ ಅಭ್ಯರ್ಥಿ

1SAVADATTI2
Published on

ಸವದತ್ತಿ: ಡಿಸಿಸಿ ಬ್ಯಾಂಕ್ ಚುನಾವಣೆಗೆ ಪಕ್ಷಾತೀತ, ಜಾತ್ಯತೀತವಾಗಿ ಪೆನಲ್ ರಚಿಸುವ ಮೂಲಕ ಸಿದ್ಧತೆ ನಡೆಸಿದ್ದು, ಎಲ್ಲರ ವಿಶ್ವಾಸ ಪಡೆದು ಸವದತ್ತಿ ಪಿಕೆಪಿಎಸ್‌ನಿಂದ ವಿರೂಪಾಕ್ಷ ಮಾಮನಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದರು.

ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತ್ತೊಂದು ಅವಧಿಗೆ ನಮ್ಮ ಬಣವು ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಸೇವೆ ಮಾಡಲು ಸಿದ್ಧನಿದು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.

ರತ್ನಾ ಮಾಮನಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಚುನಾವಣೆ ಸೇರಿ ಮುಂಬರುವ ಎಲ್ಲ ಚುನಾವಣೆಯಲ್ಲಿ ವಿರೂಪಾಕ್ಷ ಮಾಮನಿ ಅವರನ್ನು ಬೆಂಬಲಿಸಲಾಗುವುದು. ಜನರು ಆಶೀರ್ವದಿಸಬೇಕು ಎಂದು ಕೋರಿದರು.

ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಬಿ.ವಿ. ಮಲಗೌಡ್ರ, ಜಗದೀಶ ಶಿಂತ್ರಿ, ಬಸವರಾಜ ಕಾರದಗಿ, ಬಸವರಾಜ ಪುಟ್ಟಿ, ಜಗದೀಶ ಕೌಜಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net