ಡಿಸಿಸಿ ಬ್ಯಾಂಕ್ ಚಿತ್ತ ಹಳ್ಳಿಗಳತ್ತ

29hos1p dcc
ಡಿಸಿಸಿ ಬ್ಯಾಂಕ್‌ನ ನಗರ ಗ್ರಾಮದ ಚಿಕ್ಕಪೇಟೆ ಶಾಖೆಗೆ ಸುಮಾ ಸುಬ್ರಹ್ಮಣ್ಯ ಸಾಂಕೇತಿಕ ಚಾಲನೆ ನೀಡಿದರು. ಆರ್.ಎಂ.ಮಂಜುನಾಥಗೌಡ, ವಿದ್ಯಾಧರ, ಕರುಣಾಕರ ಶೆಟ್ಟಿ ಇದ್ದರು.
Published on

ಹೊಸನಗರ: ಹಳ್ಳಿಗಳ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಹಳ್ಳಿಗಳತ್ತ ಚಿತ್ತ ಹರಿಸಿದೆ ಎಂದು ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ನಗರ ಗ್ರಾಮದ ಚಿಕ್ಕಪೇಟೆಯಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ಗೆ 75ನೇ ವರ್ಷದ ಸಂಭ್ರಮ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಟ್ಟು 50 ಶಾಖೆಗಳನ್ನು ಆರಂಭಿಸುವ ಆಶಯ ಹೊಂದಲಾಗಿದೆ. ಹಂತಹಂತವಾಗಿ ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ಪಡೆಯಲಾಗುತ್ತಿದೆ ಎಂದರು.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 8 ಹೊಸ ಶಾಖೆಗಳಿಗೆ ಚಾಲನೆ ಸಿಗುತ್ತಿದೆ. ಇನ್ನೂ 5 ಹೊಸ ಶಾಖೆಗಳಿಗಾಗಿ ರಿಸರ್ವ್ ಬ್ಯಾಂಕ್ ಅನುಮತಿ ಕೋರಲಾಗಿದೆ. ನಗರದ ಚಿಕ್ಕಪೇಟೆ ಶಾಖೆ ಕಾರ್ಯಾರಂಭ ಮಾಡಿದೆ. ಆದರೆ 8 ಶಾಖೆಗಳು ಆರಂಭವಾದ ಮೇಲೆ ಸಿಎಂ, ಡಿಸಿಎಂ ಅವರನ್ನು ಆಹ್ವಾನಿಸಿ ಅದ್ದೂರಿಯಾಗಿ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ನಾಡಿಗೆ ಬೆಳಕು ನೀಡಲು ನಗರ ಹೋಬಳಿಯು ಸಂಪೂರ್ಣ ತ್ಯಾಗ ಮಾಡಿ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಈ ಭಾಗಕ್ಕೆ ಶಾಖೆ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಶಾಖೆ ತೆರೆಯುವ ಮೂಲಕ ಈಭಾಗದ ಬಡ ರೈತ, ಕೂಲಿಕಾರ್ಮಿಕರ ಆರ್ಥಿಕ ಚೈತನ್ಯಕ್ಕೆ ಒತ್ತು ನೀಡಲಾಗಿದೆ ಎಂದರು.

ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ನೂತನ ಶಾಖೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಆರ್.ಎಂ.ಮಂಜುನಾಥ ಗೌಡ, ಸುರೇಶ ಭಟ್, ಕುಮಾರ ಭಟ್, ಚಂದ್ರಶೇಖರ ಶೆಟ್ಟಿ, ಮಾಲತೇಶ ಗೌಡ, ನಾಗೇಂದ್ರ ಭೂಮಿಕಾ, ಅರುಣಾಚಲ ಮತ್ತಿತರರನ್ನು ಗೌರವಿಸಲಾಯಿತು.

ಶಿಮುಲ್ ಅಧ್ಯಕ್ಷ ವಿದ್ಯಾಧರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಮಧುಸೂದನ್ ನಾವುಡ, ದಶರಥಗಿರಿ, ಎಂಡಿ ರಾಜಣ್ಣ ರೆಡ್ಡಿ, ಪ್ರಧಾನ ವ್ಯವಸ್ಥಾಪಕ ಜಿ.ನಾಗಭೂಷಣ, ಟಿ.ಮಂಜಪ್ಪ, ಸುಜಾತಾ, ಹನುಮಂತ ರೆಡ್ಡಿ, ಶ್ರೀವಾಣಿ, ಎಸ್.ವಿ.ರಮ್ಯಾ, ಕೆ.ಆರ್.ಗಣಪತಿ, ಜಿ.ಹಾಲಪ್ಪ, ಕೆ.ಕಾಂತರಾಜ, ಕ್ಷೇತ್ರಾಕಾರಿ ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net