ಡಿಸಿಸಿ ಬ್ಯಾಂಕಿಗೆ ೧೨ ಕೋಟಿ ರೂ. ನಿವ್ವಳ ಲಾಭ

bkt-25-2
ಬಾಗಲಕೋಟೆ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ ಇದ್ದರು.
Published on

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ೨೦೨೩-೨೪ನೇ ಸಾಲಿನ ಆರ್ಥಿಕ ವರ್ಷದಲ್ಲಿ ೬೬.೪೩ ಕೋಟಿ ಲಾಭಗಳಿಸಿದ್ದು, ನಿಯಮಾನುಸಾರ ಆಧಾಯಕರ ಹಾಗೂ ಇತರೆ ಅವಶ್ಯಕ ಶಾಸನಬದ್ಧ ಅನುವು ಕಲ್ಪಿಸಿದ ನಂತರ ೧೨.೧೭ ರೂ. ನಿವ್ವಳ ಲಾಭವಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಹೇಳಿದರು.

ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗಿನ ದಿನಗಳಲ್ಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘಗಳು ಹೆಚ್ಚಿನ ಬಡ್ಡದರವನ್ನು ನೀಡುತ್ತಿರುವುದರಿಂದ ಪ್ರಸಕ್ತ ವರ್ಷದಲ್ಲಿ ಡಿಪಾಜಿಟ್ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ೧೩೯೧ ವಿವಿಧ ಸಹಕಾರಿ ಸಂಘಗಳು ಬ್ಯಾಂಕಿನ ಸದಸ್ಯತ್ವ ಪಡೆದಿವೆ. ೨೦೪.೩೫ ಕೋಟಿ ಷೇರ ಬಂಡವಾಳವಿದ್ದು, ೨೦೨೪-೨೫ನೇ ಆರ್ಥಿಕ ವರ್ಷಕ್ಕೆ ೨೨೫.೦೦ ಕೋಟಿ ರೂ. ರಷ್ಟು ಷೇರು ಸಂಗ್ರಹ ಗುರಿ ಹೊಂದಲಾಗಿದೆ. ೩೫೪.೧೮ ಕೋಟಿ ನಿಽಗಳು, ಮುಂದಿನ ದಿನಗಳಲ್ಲಿ ೪೦೦.೦೦ ಕೋಟಿ ಗುರಿ ಹೊಂದಲಾಗಿದೆ ಎಂದರು.

೩೫೯೦.೦೬ ಕೋಟಿ ರೂ.ಠೇವು ಹಣವಿದ್ದು, ಇದನ್ನು ೩೯೫೦.೦೦ ಕೋಟಿ ರೂ. ವರೆಗೆ ಏರಿಸಲು ಗುರಿ ಇಟ್ಟುಕೊಳ್ಳಲಾಗಿದೆ. ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ನಿಂದ ಪಡೆದ ಸಾಲದ ಪೈಕಿ ೯೫೨.೭೦ ಕೋಟಿ ರೂ. ಹೊರಬಾಕಿ ಇದೆ. ೫೮೦.೫೩ ಕೋಟಿ ರೂ.ಸ್ವಂತ ಬಂಡವಾಳ ಹೊಂದಿದ್ದು, ೫೧೭೧.೪೩ ಕೋಟಿ ದುಡಿಯುವ ಬಂಡವಾಳದೊಂದಿಗೆ ೭೦೮೨.೦೦ ಕೋಟಿ ರೂ. ಒಟ್ಟು ವ್ಯವಹಾರದೊಂದಿಗೆ ಬ್ಯಾಂಕ್ ಆರ್ಥಿಕ ಸಫಲತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

೧೦ ಹೊಸ ಶಾಖೆಗಳನ್ನು ಆರಂಭಿಸಿದ್ದು, ಇನ್ನು ೬ ಶಾಖೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ೫೭ ಶಾಖೆಗಳಲ್ಲಿ ೮ ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ. ಇನ್ನೂ ೩ ಶಾಖೆಗಳು ಸ್ವಂತ ಕಟ್ಟಡಗಳು ಪ್ರಗತಿಯಲ್ಲಿವೆ. ಲೆಕ್ಕ ಪರಿಶೋಧನಾ ವರದಿಯಂತೆ ಎ ಶ್ರೇಣಿ ಲಭಿಸಿದೆ. ಮೊಬೈಲ್ ಬ್ಯಾಂಕ್ ವ್ಯವಹಾರ ಆರಂಭಿಸಲು ರಿಜರ್ವ ಬ್ಯಾಂಕಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ೨೬೫ ಗಣಕೀರಣಗೊಳಿಸಲು ಅನುಮತಿ ನೀಡಲಾಗಿದೆ. ಈ ವರೆಗೆ ೪೦ ಎಟಿಎಂ ಸ್ಥಾಪಿಸಲಾಗಿದೆ. ಕಿಸಾನ್ ಕಾರ್ಡ್ ಯೋಜನೆ ಯಶಸ್ವಿಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net