ಡಿಸಿಎಂ ರಾಜೀನಾಮೆ ‌ನೀಡಲಿ

10 YERRISWAMY 04
Published on

ಬಳ್ಳಾರಿ : ತುಂಗಭದ್ರಾ ಜಲಾಶಯದ ಗೇಟ್ ಮುರಿದ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ. ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲಿ ಎಂದು ರಾಜ್ಯ ರೈತ ಸಂಘಟನ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ನಗರದ ಅತಿಥಿ ಗೃಹದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಲಾಶಯ ಗೇಟ್ ಮುರಿದು ನೀರು ಖಾಲಿಯಾಗಲು ಸರ್ಕಾರದ ನಿರ್ಲಕ್ಷತನವೇ ಕಾರಣವಾಗಿದೆ. ಕಳೆದ ಒಂದು ತಿಂಗಳಿಂದ ನಿರಂತರ ಮಳೆ ಹಾಗೂ ಪ್ರವಾಹ ಬರುತ್ತಿದ್ದರು ಜಲಾಶಯಗಳ ಸುರಕ್ಷತೆ ಪ್ರವಾಹ ಹಾನಿ ಬಗ್ಗೆ ಗಂಭೀರ ಚಿಂತನೆ ನಡೆಸದೆ ನಿರ್ಲಕ್ಷತನ ಮಾಡಿದ್ದಾರೆ. ಡಿಸಿಎಂ ಬೇಜವಾಬ್ದಾರಿತನದಿಂದ ಉತ್ತರ ಕರ್ನಾಟಕದ 5 ಜಿಲ್ಲೆಗಳ 22 ಲಕ್ಷ ಹೇಕ್ಟರ್ ನಲ್ಲಿ ಭತ್ತ ಬೆಳೆಯುತ್ತಿದ್ದ ರೈತರ ಬದುಕು ನಾಶವಾಗಲು ಕಾರಣವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 70 ವರ್ಷಗಳ ಹಳೆಯದಾದ ಗೇಟ್ ಗಳ ಬದಲಾಯಿಸಬೇಕು ಈ ಬಗ್ಗೆ ನಿಗಾ ವಹಿಸುವಂತೆ ಒತ್ತಾಯ ಮಾಡುತ್ತಿದ್ದರು ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ವರ್ಷದ ಬರಗಾಲ ರೈತರನ್ನು ಕಾಡಿತ್ತು, ಈ ವರ್ಷ ಜಲಾಶಯ ಭರ್ತಿಯಾಗಿದೆ ಉತ್ತಮ ಬೆಳೆ ಬರುತ್ತದೆ ಎನ್ನುವ ರೈತರ ಸಂತೋಷ ಕಮರಿ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ವರ್ಷ ಕಾವೇರಿ ಭಾಗದ ನೀರನ್ನು ಖಾಲಿ ಮಾಡಿ ರೈತರನ್ನ ಬಲಿಕೊಟ್ಟಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ವರ್ಷ ಈ ಭಾಗದ ರೈತರು ಬಲಿಪಶು ಆಗಿದ್ದಾರೆ ನೀರಾವರಿ ಸಚಿವರು ಕೂಡಲೇ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷಗಿರಿ ರಾಜಕೀಯ ಮಾಡುವುದು ಒಳ್ಳೆಯದು ಎಂದು ಅಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net