ಡಿಸಿ ವ್ಯಾಪ್ತಿಯ ಪ್ರಕರಣಗಳ ವಿಚಾರಣೆಗಾಗಿ ಮನವಿ

Published on

ಬೆಳಗಾವಿ: ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯ ಅನೇಕ ತಾಲೂಕುಗಳಿಂದ ವಿವಿಧ ಪ್ರಕರಣಗಳ ವಿಚಾರಣೆಗಾಗಿ ನಿತ್ಯವೂ ಕಕ್ಷಿದಾರರು, ವಕೀಲರು ಆಗಮಿಸುತ್ತಾರೆ. ಜಿಲ್ಲಾಧಿಕಾರಿಗಳು ಕೆಲಸದ ಒತ್ತಡ ಹೆಚ್ಚಿರುವುದರಿಂದ ಸಮಯದ ಹೊಂದಾಣಿಕೆ ನೋಡಿಕೊಂಡು, ನಿತ್ಯವೂ ಮಧ್ಯಾಹ್ನ 3 ಅಥವಾ 4.30ರ ನಂತರ ಒಂದು ಸಮಯ ನಿಗದಿ ಮಾಡಿ, ಪ್ರಕರಣಗಳ ವಿಚಾರಣೆ ನಡೆಸಿದರೇ ನಮ್ಮ ವಕೀಲರಿಗೆ ಅನುಕೂಲವಾಗಲಿದೆ ಎಂದು ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಸುಧೀರ ಚವ್ಹಾಣ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.ಜತೆಗೆ ಬೆಳಗಾವಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಅನೇಕ ನ್ಯಾಯಾಲಗಳಿರುವುದರಿಂದ ಎಲ್ಲ ಪ್ರಕರಣಗಳಿಗೂ ಹಾಜರಾಗಬೇಕಿರುತ್ತದೆ. ಜತೆಗೆ ಡಿಸಿ ಕಚೇರಿಯಲ್ಲಿ ಒಂದು ಸಮಯ ನಿಗದಿ ಮಾಡುವುದರಿಂದ ಕಕ್ಷಿದಾರರಿಗೂ ಮತ್ತು ವಕೀಲರಿಗೂ ಅನುಕೂಲವಾಗಲಿದೆ ಎಂದು ವಕೀಲರ ಸಂಘದ ಅಧ್ಯಕ್ಷರು ತಮ್ಮ ಮನವಿಯಲ್ಲಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಗಿರಿರಾಜ ಪಾಟೀಲ ಕೂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net