

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವರ ಸಭೆ ನಡೆಯುವ ಸಂದರ್ಭದಲ್ಲಿ ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಮಾರ್ಗದಲ್ಲಿ ಸಾರ್ವಜನಿಕರ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.
ಬಸ್ ನಿಲ್ದಾಣದಿಂದ ಬರುವ ವಾಹನಗಳು ಜೇವರ್ಗಿ ಕ್ರಾಸ್ನಿಂದ ಎಸ್ಬಿ ಕಾಲೇಜ್ ಮಾರ್ಗವಾಗಿ ಹೊಗಬೇಕು. ಸೂಪರ್ ಮಾರ್ಕೆಟ್ನಿಂದ ಬರುವ ವಾಹನಗಳು ಎಸ್ಬಿ ಪೆಟ್ರೋಲ್ ಪಂಪನಿಂದ ಡಿಸಿ ಕಚೇರಿ ಹಿಂದಿನಿಂದ ನೊಬೇಲ್ ಶಾಲೆ ಮಾರ್ಗವಾಗಿ ಹೋಗಬೇಕು ಎಂದು ತಿಳಿಸಿದ್ದಾರೆ. ಎಸ್ಬಿ ಪೆಟ್ರೋಲ್ ಪಂಪ್ನಿಂದ ಎಸ್ವಿಪಿ ಚೌಕ್ವರೆಗೆ ಸಂಪೂರ್ಣ ರಸ್ತೆ ಬಂದ್ ಇರಲಿದೆ ಎಂದು ತಿಳಿಸಿದ್ದಾರೆ.
ಗಣ್ಯರ ವಾಹನ ಡಿಸಿ ಕಚೇರಿ ಆವರಣದಲ್ಲಿ, ಉನ್ನತ ಅಧಿಕಾರಿಗಳ ವಾಹನ ಎನ್ಸಿಸಿ, ಕನ್ನಡ ಭವನ ಆವರಣದಲ್ಲಿ, ಡಿಸಿ ಕಚೇರಿ ನೌಕರರ ವಾಹನ ಕೂಡಾ ಆವರಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.