ಡಿಸಿ, ಎಸ್‌ಪಿ ಭೇಟಿಯಾಗಿ ಸನ್ಮಾನಿಸಿದ ನೂತನ ಶಾಸಕ

ಡಿಸಿ, ಎಸ್‌ಪಿ ಭೇಟಿಯಾಗಿ ಸನ್ಮಾನಿಸಿದ ನೂತನ ಶಾಸಕ
Published on

ಹಾಸನ: ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಪಿ. ಸ್ವರೂಪ್ ಅವರು ಬುಧವಾರ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಅವರನ್ನು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.

ಚುನಾವಣೆಯಲ್ಲಿ ಅವಿರತ ಶ್ರಮದಿಂದ ನ್ಯಾಯಸಮ್ಮತ ಚುನಾವಣೆಗೆ ಶ್ರಮವಹಿಸಿದ ಹಿನ್ನೆಲೆಯಲ್ಲಿ ಸ್ವರೂಪ್ ಅವರು ಡಿಸಿ ಎಂ.ಎಸ್. ಅರ್ಚನಾ ಹಾಗೂ ಎಸ್ಪಿ ಹರಿರಾಂ ಶಂಕರ್ ಅವರನ್ನು ಸನ್ಮಾನಿಸಿ, ಕುಶಲೋಪರಿ ವಿಚಾರಿಸಿದರು. ಹಾಸನ ತಾಲೂಕು ತಹಸೀಲ್ದಾರ ಶ್ವೇತಾ ಅವರು ಕೂಡ ತಮ್ಮ ಕಚೇರಿಯಲ್ಲಿ ಸ್ವರೂಪ್ ಅವರನ್ನು ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಜೆಡಿಎಸ್ ಮಾಧ್ಯಮ ವಕ್ತಾರ ಹೊಂಗೆರೆ ರಘು ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net