ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಯುವಕ ಸಾವು

Bike Accident_2
Published on

ಅರಕಲಗೂಡು: ಹಾಸನದಲ್ಲಿ ಅಗ್ನಿಪಥ ಸೇನಾ ನೇಮಕಾತಿ ಮುಗಿಸಿ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ತಾಲೂಕಿನ ರಾಗಿಮರೂರು ಬಳಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಒಬ್ಬ ಯುವಕ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಮಲ್ಲಾಪುರ ಗಾಮದ ಎಂ.ಸಿ.ವಿನಯ್ (20) ಮೃತರು. ಪಿರಿಯಾಪಟ್ಟಣ ತಾಲೂಕು ಶೆಟ್ಟಿಹಳ್ಳಿ ಗ್ರಾಮದ ಮನೋಜ್ (22) ಗಾಯಾಳು. ಇಬ್ಬರೂ ಹಾಸನದಲ್ಲಿ ಅಗ್ನಿಪಥ ಸೇನಾ ನೇಮಕಾತಿ ಮುಗಿಸಿಕೊಂಡು ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಂಗಳವಾರ ಮಧ್ಯಾಹ್ನ ಅವಘಢ ಸಂಭವಿಸಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ವಿನಯ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net