

ಕಲಬುರಗಿ: ನಗರದ ಫಿಲ್ಟರ್‌ಬೆಡ್ ಬಳಿ ಯುವಕನೊರ್ವ ಬೈಕ್ ಮೇಲೆ ವೇಗವಾಗಿ ಬಂದು ಡಿವೈಡರ್ಗೆ ಗುದ್ದಿ, ಅಪಘಾತಕ್ಕೆ ಈಡಾಗಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ೧೧ಗಂಟೆಗೆ ನಡೆದಿದೆ. ಮಹಾದೇವ ನಗರದ ಶರಣು (೨೧) ಮೃತ ಯುವಕ. ಮನೆಯಿಂದ ಹೀರಾಪುರ್ ಕ್ರಾಸ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಯುವಕನು ಫಿಲ್ಟರ್ ಬೆಡ್ ಬಳಿ ವೇಗವಾಗಿ ಆಗಮಿಸಿ, ಡಿವೈಡರ್‌ಗೆ ಗುದಿದ್ದು, ಭಾರಿ ಗಾಯಗೊಂಡಿದ್ದರಿAದ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ವೇಳೆಗೆ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ನೀಡಿದ ದೂರಿನಂತೆ ಸಂಚಾರಿ ಪೊಲೀಸ್ ಠಾಣೆ -೨ರಲ್ಲಿ ಪ್ರಕರಣ ದಾಖಲಾಗಿದೆ.