ಡಿವೈಡರ್‌ಗೆ ಕಾರು ಡಿಕ್ಕಿ,ಇಬ್ಬರ ಸಾವು

CTD...
Published on

ಚಿತ್ರದುರ್ಗ:ಮೊಳಕಾಲ್ಮೂರು ತಾಲೂಕು ಬೊಮ್ಮಕ್ಕನಹಳ್ಳಿ ಬಳಿಯ ರಾಜ್ಯಹೆದ್ದಾರಿ 150 ಎ ರಸ್ತೆಯಲ್ಲಿ ಬೆಳಗ್ಗೆ 7ರ ಹೊತ್ತಿಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಬೆಂಗಳೂರಿಂದ ಯಾದಗಿರಿಗೆ ಕಾರಿನ ಆರು ಪ್ರಯಾಣಿಕರು ತೆರಳುತ್ತಿದ್ದು,ಅದರಲ್ಲಿದ್ದ ಯಾದಗಿರಿ ಮೂಲದ ಮೌಲಾ(35)ಹಾಗೂ ರೆಹಮಾನ್(15)ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಫಾತಿಮಾಬೇಗಂ,ಸಲೀಮಾ ಬೇಗಂ ಹಾಗೂ ಸಮೀರ್ ಎಂಬುವವರನ್ನು ಬಳ್ಳಾರಿ ಆಸ್ಪತ್ರೆಗೆ ಕರೆದೊಯ್ಯಲಾ ಗಿದೆ. ಸ್ಥಳಕ್ಕೆ ಪಿಎಸ್‌ಐ ಮಹೇಶ್‌ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಂಪುರ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಪ್ರಕರಣ ನಡೆದಿದೆ.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net