ಡಿವೈಡರ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

images-03
Published on


ಚಿತ್ರದುರ್ಗ: ಕಾರೊಂದು ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದು, ಅದರಲ್ಲಿದ್ದ ಬಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೊಳಕಾಲ್ಮೂರು ತಾಲೂಕು ತಮ್ಮೇನಹಳ್ಳಿ ಬಳಿ ಭಾನುವಾರ ಮುಂಜಾನೆ ನಡೆದಿದೆ. ಚಿಂಚೋಳಿ ತಾಲೂಕು ಹುಲಸಗುಡ್ಡ ಗ್ರಾಮದ ನಾಗೇಂದ್ರ (50), ಕಾರ್ತಿಕ (13) ಮೃತರು. ಗಾಯಗೊಂಡಿರುವ ಪದ್ಮಾವತಿ, ಪ್ರಜ್ವಲ್, ಪೃಥ್ವಿ ಹಾಗೂ ಕಾರು ಚಾಲಕ ಸೂರ್ಯಕಾಂತ ಅವರನ್ನು ರಾಂಪುರ ಆಸ್ಪತ್ರೆಗೆ ಸೇರಿಸಲಾಗಿದೆ. ರಾಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net