ಡಿವೈಎಸ್ಪಿ ವಿರುದ್ಧ ಯುವಕನ ವಿಡಿಯೋ ವೈರಲ್

Published on

ಚಾಮರಾಜನಗರ: ಚಾ.ನಗರದ ಸೆನ್ ಡಿವೈಎಸ್ಪಿ ಪವನ್ ಕುಮಾರ್ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ವೈರಲ್ ಆಗಿದೆ.

ಬೆಂಗಳೂರು ಮೂಲಕ ಬ್ಯಾಡ್ಮಿಂಟನ್ ಕೋಚ್ ಚಂದನ್ ಎಂಬ ವ್ಯಕ್ತಿ ವಿಡಿಯೋ ಮಾಡಿದ್ದು, ಇದರಲ್ಲಿ ಡಿವೈಎಸ್ಪಿ ಪವನ್ ಕುಮಾರ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ನಾನು ಪವನ್ ಕುಮಾರ್ ಅವರಿಗೆ ಉಚಿತವಾಗಿ ಬ್ಯಾಡ್ಮಿಂಟನ್ ತರಬೇತಿ ನೀಡಿದ್ದು, ಅವರಿಂದ ಹಣವನ್ನು ಪಡೆದಿದ್ದೇನೆ. ನನಗೀಗ ಪವನ್ ಕುಮಾರ್ ಕಿರುಕುಳ ನೀಡುತ್ತಿದ್ದಾರೆ. ನಾನು ಸತ್ತ ಮೇಲೆ ನನ್ನ ತಾಯಿಯನ್ನು ನೀವೆ ನೋಡಿಕೊಳ್ಳಿ, ನಮ್ಮ ಅತ್ತೆ ಮನೆಗೆ ಹೇಳುತ್ತೇನೆ ಎನ್ನುತ್ತೀರಾ? ನಾನು ಸತ್ತರೇ ನನ್ನ ಹೆಂಡತಿ ಮಕ್ಕಳನ್ನು ನೀವು ನೋಡಿಕೊಳ್ಳುತ್ತೀರಾ. 23 ಪೊಲೀಸರಿಗೆ ಯಾವುದೇ ಹಣ ಪಡೆಯದೇ ತರಬೇತಿ ನೀಡಿದ್ದೇನೆ. ನಾನು ಮುಂದಿನ ಜನ್ಮದಲ್ಲಿ ನಿಮ್ಮ ಸಾಲವನ್ನು ತೀರಿಸುತ್ತೇನೆ. ನನ್ನ ಸಾವಿಗೆ ಡಿವೈಎಸ್ಪಿ ಪವನ್ ಕುಮಾರ್ ಕಾರಣ ಎಂದು ವಿಡಿಯೋವನ್ನು ಯುವಕ ಹರಿಬಿಟ್ಟಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆನ್ ಡಿವೈಎಸ್ಪಿ ಪವನ್ ಕುಮಾರ್ ವಿಜಯವಾಣಿಯೊಂದಿಗೆ ಮಾತನಾಡಿ, ನಾನು ಆತ ಮತ್ತು ಅವನ ತಾಯಿಯ ಕಷ್ಟವನ್ನು ನೋಡಲಾರದೇ ಮಾನವೀಯತೆ ದೃಷ್ಟಿಯಿಂದ ಹಣವನ್ನು ನೀಡಿದ್ದೇ, ಆದರೆ ಹಣ ವಾಪಸ್ ಕೇಳಲಾಗಿ ವಿಡಿಯೋ ಮಾಡಿದ್ದಾನೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net