ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

Demand for fulfillment of various demands
ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯದ ಎಲ್ಲ ದಿನಗೂಲಿ ೇಮಾಭಿವೃದ್ಧಿ ವಿಧೇಯಕದಡಿ ನೇಮಕವಾದ ನೌಕರರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಚಂದ್ರಶೇಖರ ಬುರಾಣಪೂರ, ಸುರೇಶ ಕೊಂಡಗೂಳಿ, ಲಕ್ಷ$್ಮಣ ಹಂದ್ರಾಳ ಮತ್ತಿತರರಿದ್ದಾರೆ.
Published on

ವಿಜಯಪುರ : ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯದ ಎಲ್ಲ ದಿನಗೂಲಿ ೇಮಾಭಿವೃದ್ಧಿ ವಿಧೇಯಕದಡಿ ನೇಮಣೂಕಿಯಾದ ನೌಕರರ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಬುರಾಣಪೂರ ಮಾತನಾಡಿ, ದುಬಾರಿ ದಿನಮಾನದಲ್ಲಿ ದಿನಗೂಲಿ ನೌಕರರ ಜೀವನ ಸಾಗಿಸುವುದು ಕಷ್ಟಕರವಾಗಿದೆ. ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆ ಖಾಯಂ ನೌಕರರಿಗೆ ನೀಡುತ್ತಿರುವಷ್ಟೇ ನೀಡಬೇಕು. ಈಗ ಖಾಯಂ ನೌಕರರಿಗೆ ನೀಡುತ್ತಿರುವ ಶೇ. 90 ಭತ್ಯೆಯನ್ನು ತೆಗೆದು ಹಾಕುವ ಜತೆಗೆ 100 ಕ್ಕೆ 100ರಷ್ಟು ನೀಡಬೇಕು ಎಂದು ಆಗ್ರಹಿಸಿದರು.

ಅಧಿನಿಯಮದಲ್ಲಿ 2006 ಏಪ್ರಿಲ್​ 10 ರ ಪೂರ್ವದಲ್ಲಿ 10 ವರ್ಷ ದಿನಗೂಲಿ ಸೇವೆ ಕಡಿಮೆ ಇರದಂತೆ ಕಾರ್ಯನಿರ್ವಹಿಸಿ ಸೇವೆಯನ್ನು ಪೂರ್ಣಗೊಳಿಸಿದಂತಹ ನೌಕರನಾಗಿರಬೇಕು ಎಂದು ಹೇಳಲಾಗಿದೆ. ಕಾರಣ ಆವರು ಹಳೆ ನೌಕರರಾಗಿರುವುದರಿಂದ ದಿನಗೂಲಿ ಪೂರ್ತಿ ಸೇವೆ ಹಿಡಿದು ಹಳೆ ಪಿಂಚಣಿ ಸೌಲಭ್ಯ ನೀಡಬೇಕು ಅಥವಾ ನಿವೃತ್ತಿಯಾದ ೇಮಾಭಿವೃದ್ಧಿ ನೌಕರರಿಗೆ 10 ರಿಂದ 15 ಸಾವಿರ ಪ್ರತಿ ತಿಂಗಳು ಪಿಂಚಣಿ ನೀಡಬೇಕು. ಅಲ್ಲದೆ, ಡಿಸಿಆರ್​ಜಿ ಸೌಲಭ್ಯ ಮಂಜೂರು ಮಾಡುವುದು ಸೇರಿದಂತೆ ವಾರ್ಷಿಕ ವೇತನ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕೊಂಡಗೂಳಿ ಹಾಗೂ ಮಲ್ಲಾರಾವ ಕುಲಕರ್ಣಿ ಮಾತನಾಡಿ, ದಿನಗೂಲಿ ನೌಕರರು ಸೇವೆಯಲ್ಲಿದ್ದಾಗ ಮೃತರಾದರೆ ನೌಕರರ ಅವಲಂಬಿತರಿಗೆ ಅನುಕಂಪ ಆಧಾರದ ಮೇಲೆ ನೌಕರಿ ನೀಡಬೇಕು. ರಾಜ್ಯ ಸರ್ಕಾರದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿ ಇದ್ದು, ದಿನಗೂಲಿ ನೌಕರರನ್ನು ತುಂಬಬೇಕು. ಅಲ್ಲದೆ, ನೌಕರರೂ ಕಾರ್ಯನಿರತರಾದಾಗ ಮೃತರಾದರೆ ಅಂತಿಮ ವಿಧಾನ ಖರ್ಚಿಗಾಗಿ 25,000 ರೂ. ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಲಕ್ಷ$್ಮಣ ಹಂದ್ರಾಳ, ಸುರೇಶ ಜಿ.ಬಿ., ಸುರೇಖಾ ರಜಪೂತ, ರವಿ ಶಂಕರ ದಾಮನಕರ, ಶಂಕರಗೌಡ ಪಾಟೀಲ, ಕಸ್ತೂರಿಚಂದ ಒಣಕುದರಿ, ಬಾಳಕೃಷ್ಣ ಕಡಕೋಳ, ಶರಣಪ್ಪ ಹರಿಜನ, ದಶರಥ ಬಬಲೇಶ್ವರ, ಶಿವಪ್ಪ ಅಳಗುಂಡಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net