

ಸೊರಬ: ಗಣಪತಿ ವಿಸರ್ಜನೆ ವೇಳೆ ಯಾವುದೇ ರೀತಿಯ ಡಿಜೆ, ಪೇಪರ್ ಬ್ಲಾಸ್ಟಿಂಗ್ ಬಳಸುವಂತಿಲ್ಲ ಎಂದು ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳ ಮತ್ತು ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರಿಗಾಗಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಸೂಚನೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು ಯಾವುದೇ ಅಭ್ಯಂತರವಿಲ್ಲ. ವೈಯಕ್ತಿಕ ಜಾಗದಲ್ಲಿ ಪ್ರತಿಷ್ಠಾಪಿಸುವುದಾದರೆ ಆ ಸ್ಥಳದ ವ್ಯಕ್ತಿಗಳ ಅನುಮತಿ ಕಡ್ಡಾಯ. ಪಿಡಬ್ಲುಡಿ, ಪಂಚಾಯಿತಿಗಳ ಅನುಮತಿ ಪಡೆಯಬೇಕು. ವಿಸರ್ಜನೆ ಸಮಯದಲ್ಲಿ ಮಾರ್ಗ ಬದಲಾವಣೆ ಮಾಡುವಂತಿಲ್ಲ. ಯಾವುದೇ ಧರ್ಮದವರಿಗೆ ತೊಂದರೆ ಉಂಟು ಮಾಡುವ ರೀತಿ ಸಂದೇಶ ಮತ್ತು ಫೋಟೋಗಳನ್ನು ಹಾಕಬಾರದು ಎಂದು ತಿಳಿಸಿದರು.
ವಿದ್ಯುತ್ ಸರಬರಾಜಿಗೆ ಸಂಬಂಸಿ ಮೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದು ಪತ್ರ ಹಾಜರುಪಡಿಸಬೇಕು. ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಕರ್ಕಶ ಮತ್ತು ಅತಿ ಹೆಚ್ಚು ಶಬ್ಧ ಮಾಡುವಂತಹ ಯಾವುದೇ ಸಂಗೀತ ಸಾಧನಗಳನ್ನು, ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆಯವರಿಗೆ ನಡೆಸುವ ಕಾರ್ಯಕ್ರಮಗಳ ವಿವರವನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಪಿಎಸ್‌ಐ ನವೀನ್‌ಕುಮಾರ್, ನಾಗೇಶ್, ಲೋಕೇಶ್, ರಾಘವೇಂದ್ರ, ಅರುಣ್, ಗುರುಮೂರ್ತಿ, ಮನೋಹರ, ಮಂಜುನಾಥ, ಪುರುಷೋತ್ತಮ, ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.