ಡಿಜಿಟಿಲೀಕರಣಕ್ಕೆ ಒತ್ತು ನೀಡಲಿ

Published on

ಬಳ್ಳಾರಿ : ಸದಸ್ಯರ ಅನುಕೂಲಕ್ಕಾಗಿ ನೂತನ ಡಿಜಿಟಿಲೀಕರಣಕ್ಕೆ ಒತ್ತು ನೀಡಬೇಕು ಎಂದು ಚಾರ್ಟೆಡ್ ಅಕೌಂಟೆಂಟ್ ರಾಜೇಶ್ ಭಾಗ್ರೀಚ ಅಭಿಪ್ರಾಯಪಟ್ಟರು.
ನಗರದ ಗಾಂಧಿನಗರದ ಮಿಲನ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಕಚೇರಿಯಲ್ಲಿ ಶನಿವಾರ ನಡೆದ ಎಂಟನೇ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ನೂತನ ತಂತ್ರಜ್ಞಾನದಿಂದ ಸದಸ್ಯರಿಗೆ ನಗದು ವ್ಯವಹಾರ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ ಎಂದರು. ಸೂಕ್ತ ವ್ಯಕ್ತಿಯನ್ನು ಆರಿಸಿ ಸಾಲ ವಿತರಿಸುವುದರಿಂದ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಪ್ರಮುಖರಾದ ಸಂಸ್ಥೆಯ ನಿರ್ದೇಶಕರಾದ ನಲ್ಲರೆಡ್ಡಿ, ವೇಣುಗೋಪಾಲ್ ಗುಪ್ತ, ಎಸ್.ವಿ. ಬಾಲಕೃಷ್ಣ, ಎಂ. ಕೆಂಚನಗೌಡ, ಕೆ. ಕಿರಣಕುಮಾರ್, ಕೆ.ಐ. ಆನಂದಕುಮಾರ, ಪುರಷೊತ್ತಮರೆಡ್ಡಿ, ಎಲ್. ನಾಗರೆಡ್ಡಿ, ಉಷಾರಾಣಿ, ಮಮತಾ ಬಾಗ್ರಿಚ, ಹರ್ಷದ್ ಅಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net