ಡಿಎಪಿ ಗೊಬ್ಬರಕ್ಕೆ ಹೆಚ್ಚಾದ ಡಿಮ್ಯಾಂಡ್ !

DAP
Published on

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ವಾಣಿಜ್ಯ ಬೆಳೆ ಹತ್ತಿ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರದ ಕೃತಕ ಅಭಾವ ಮುಂದುವರೆದ ಕಾರಣ ನಕಲಿಗೊಬ್ಬರ ಮಾರಾಟದ ಆತಂಕ ಅನ್ನದಾತರನ್ನು ಕಾಡುವಂತೆ ಮಾಡಿದೆ.

ಜಿಲ್ಲೆಯಲ್ಲಿ 1.66ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದ್ದು, ಸಧ್ಯ ಬಹುತೇಕ ಬಿತ್ತನೆ ಪೂರ್ಣಗೊಂಡಿದೆ. ಇದರ ಜತೆಗೆ ರೈತರು ಕಲ್ಯಾಣ ಕನರ್ಾಟಕದ ಸಾಂಪ್ರದಾಯಿಕ ಬೆಳೆಯಾದ ತೊಗರಿ 96 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಹತ್ತಿಗೆ ವರದಾನವಾಗಿ ಪರಿಣಮಿಸಿದೆ. ಅಲ್ಲದೆ ಮೂರು ದಿನಗಳಿಂದ ವರುಣ ಬ್ರೇಕ್ ಕೊಟ್ಟ ಕಾರಣ ಸಧ್ಯ ರೈತರಿಗೆ ಡಿಎಪಿ ಅವಶ್ಯಕತೆ ಹೆಚ್ಚಾಗಿದೆ.

ಡಿಎಪಿ ಆರೋಗ್ಯಕರ ಸಸ್ಯ ಬೆಳವಣಿಗೆಗೆ ಅಗತ್ಯವಿರುವ ಎರಡು (18.46.0) ಪ್ರಾಥಮಿಕ ಪೋಷಕಾಂಶ ಒಳಗೊಂಡಿರುವ ಖನಿಜಾಂಶಗಳ ಮಿಶ್ರಣ. ಇದು ಸಾರಜನಕ, ರಂಜಕವನ್ನು ಸೂಚಿಸುತ್ತದೆ. ಆದರೆ ರಸಗೊಬ್ಬರದ ಅಂಗಡಿಗಳಲ್ಲಿ ಡಿಎಪಿ ಸ್ಟಾಕ್ ಇಲ್ಲ ಎಂಬ ಮಾತು ಕೇಳಿ ಅನ್ನದಾತರು ಗೊಬ್ಬರ ಖರೀದಿಗೆ ಬೇರೆ ಜಿಲ್ಲೆಗಳತ್ತ ಮುಖ ಮಾಡುವಂತಾಗಿದೆ.

ಮಾರುಕಟ್ಟೆಯಲ್ಲಿ ಡಿಎಪಿ ಗೊಬ್ಬರಕ್ಕೆ ಡಿಮ್ಯಾಂಡ್ ಹೆಚ್ಚಾದ ಕಾರಣ ಕೆಲವರು ನಕಲಿ ಗೊಬ್ಬರವನ್ನು ಮಿಶ್ರಣ ಮಾಡಿ, ಡಿಎಪಿ ಹೆಸರು ಮುದ್ರಿಸಿದ ಚೀಲಗಳಲ್ಲಿ ತುಂಬಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಶಹಾಪುರ ಪೊಲೀಸರು ಬುಧವಾರ ಬೀರಣ್ಣ ಮಲ್ಲಪ್ಪ, ಮುತ್ತಪ್ಪ ಪೂಜಾರಿ, ಪರಮಾನಂದ, ಭೀಮಸಿಂಗ್ ರಾಠೋಡ್ ಎಂಬ ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.

ಅಲ್ಲದೆ ಅವರಿಂದ ಎಸ್ಎಸ್ಪಿ ಹೆಸರಿನ 520 ಚೀಲ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಡಿಎಪಿ ಕೊರತೆ ಇಲ್ಲ. ಮಾರುಕಟ್ಟೆಗೆ ಬಂದ ಕ್ಷಣಾರ್ಧದಲ್ಲೇ ಎಲ್ಲವೂ ಮಾರಾಟವಾಗುತ್ತಿದೆ ಎಂಬ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕಳೆದ 2 ವಾರದ ಹಿಂದೆ 1500 ಟನ್ ಡಿಎಪಿ ಜಿಲ್ಲೆಗೆ ಬಂದಿದೆ ಎಂಬ ಮಾಹಿತಿ ಇದ್ದರೂ ರೈತರಿಗೆ ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರ ಕೊಡಬೇಕಿದೆ.

ಹತ್ತಿ, ತೊಗರಿ, ಮೆಣಸಿನಕಾಯಿ ಬಿತ್ತನೆ ಹಾಗೂ ಭತ್ತ ನಾಟಿ ಮಾಡಿದ ತಕ್ಷಣ ಮೊದಲು ನಮಗೆ ಡಿಎಪಿ ಗೊಬ್ಬರದ ಅವಶ್ಯಕತೆ ಇರುತ್ತದೆ. ಅದಾದ ಬೆಳೆ ಲ ಹಿಡಿಯುವ ಹಂತದಲ್ಲಿ ಕಾಂಪ್ಲೆಕ್ಸ್ಗಳನ್ನು ಬಳಸಲಾಗುತ್ತದೆ. ಆದರೆ ಜಿಲ್ಲೆಯ ಕೃಷಿ ಅಧಿಕಾರಿಗಳು ಮತ್ತು ರಸಗೊಬ್ಬರದ ಅಧಿಕೃತ ಮಾರಾಟಗಾರರು ಡಿಎಪಿ ಮತ್ತು ಕಾಂಪ್ಲೆಕ್ಸ್ಗಳನ್ನು ಒಂದೇ ಬಾರಿ ಖರೀದಿಸಿ ಎಂದು ಹೇಳುತ್ತಿದ್ದಾರೆ. ಆದರೆ ಇವೆರಡು ಖರೀದಿ ಮಾಡಲು ರೈತರ ಬಳಿ ಅಷ್ಟೊಂದು ಹಣವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net