ಡಿ.೧, ೨ ರಂದು ದಾನ್ನಮ್ಮದೇವಿ ಜಾತ್ರೆ

bkt-29-5
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಡಾ.ಸಿ.ಎಸ್.ಪಾಟೀಲ, ಶ್ರೀಶೈಲ ಕರಿಶಂಕರಿ, ಎ.ಎಸ್.ಪಾವಟೆ, ರಂಗನಗೌಡ ದಂಡಣ್ಣವರ್, ಮಹಾಬಳೇಶ್ವರ ಗುಡಗುಂಟಿ, ಬಸವರಾಜ ಮುಕ್ಕುಪ್ಪಿ ಇದ್ದರು.
Published on

ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿಯ ಸಾಯಿಮಂದಿರದಲ್ಲಿರುವ ಗುಡ್ಡಾಪುರ ದಾನಮ್ಮದೇವಿ ಜಾತ್ರಾ ಮಹೋತ್ಸವವು ಡಿ.೧ ಮತ್ತು ೨ ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರೇಶ್ವರ ವಿಶ್ವ ಧರ್ಮ ಶಾಂತಾಶ್ರಮ ಸಾಯಿ ಮಂದಿರ ಹಾಗೂ ವರದಾನೇಶ್ವರಿ ಮಹಿಳಾ ಸಂಘದಿಂದ ಪ್ರತಿ ವರ್ಷವೂ ಜಾತ್ರೆ ಏರ್ಪಡಿಸುತ್ತಾ ಬರಲಾಗಿದೆ. ಡಿ.೧ ರಂದು ಛಟ್ಟಿ ಅಮಾವಾಸ್ಯೆ ದಿನದಂದು ಬೆಳಗ್ಗೆ ದೇವಿಗೆ ಅಭಿಷೇಕ, ವಿಶೇಷ ಪೂಜೆ ಜರುಗಲಿದೆ. ಬೆಳಗ್ಗೆ ೯ ಗಂಟೆಗೆ ಸಕಲ ವಾದ್ಯ ಮೇಳದೊಂದಿಗೆ ಕುಂಭ ಹೊತ್ತ ಮಹಿಳೆಯರೊಂದಿಗೆ ದಾನಮ್ಮ ದೇವಿಯ ಪಲ್ಲಕ್ಕಿ ಉತ್ಸವ, ನಂತರ ಮುತ್ರÊೆದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದ್ದು, ೧೦.೩೦ ಗಂಟೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.

ಶಿರೂರ ಮಹಾಂತ ತೀರ್ಥ ಡಾ.ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕುಮಾರೇಶ್ವರ ವಿಶ್ವ ಧರ್ಮ ಶಾಂತಾಶ್ರಮದ ಅಧ್ಯಕ್ಷ ಜಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪುರದ ಕನ್ನಡ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಜಯಶ್ರೀ ಹಿರೇಮಠ ಅವರು `ಶಿವಶರಣೆ ಶ್ರೀದಾನ ಮ್ಮದೇವಿ ಚರಿತಾಮೃತ' ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಉದ್ದಿಮೆದಾರ ಜಿ.ಎಮ್.ಸಿಂಧೂರ, ವರದಾನೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಪಾರ್ವತಮ್ಮ ಬಳೂಲಮಠ ಆಗಮಿಸುವರು ಎಂದು ಹೇಳಿದರು.

ದಾನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.೨ ರಂದು ೫.೩೦ ಗಂಟೆಗೆ ಸಾಯಿ ಮಂದಿರದ ನವ್ಯ ವಚನ ಗುಚ್ಛ ಭಾಗ-೨" ಲೋಕಾರ್ಪಣೆಗೊಳ್ಳಲಿದೆ. ನರೇಗಲ್ಲ-ಮೂಲಿಮಠ ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕೃತಿ ಬಿಡುಗಡೆ ಗೊಳಿಸುವರು. ಸಾಯಿ ಮಂದಿರದ ಅಧ್ಯಕ್ಷ ಜಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಎಸ್.ಪಾವಟೆ ಕೃತಿ ಪರಿಚಯಿಸುವರು. ಕವಿ, ಕೃತಿ ರಚನಾಕಾರ ಬಸವರಾಮ ಮಠ, ಸಮಾನ ಮನಸ್ಕ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಾ.ಸಿ.ಎಸ್. ಪಾಟೀಲ, ಕ.ವ.ಸಾ.ಪರಿಷತ್ತಿನ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ವರದಾನೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಪಾರ್ವತಮ್ಮ ಬಳೂಲಮಠ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಾರುತಿ ಪಾಟೋಳಿ ಉಪಸ್ಥಿತರಿರುವರು ಎಂದು ತಿಳಿಸಿದರು.

ಸಂಜೆ ೭.೩೦ ಗಂಟೆಗೆ ಬೆಂಗಳೂರಿನ "ನಿರ್ದಿಗಂತ" ನಾಟಕ ತಂಡದವರಿಂದ "ತಿಂಡಿಗೆ ಬಂದ ತುಂಡೇರಾಯ" ಹಾಸ್ಯ ಭರಿತ ನಾಟಕ ಸಾಯಿ ಮಂದಿರದ ಬಯಲುರಂಗ ಮಂದಿ ರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.

ಮುಖಂಡರಾದ ಡಾ.ಸಿ.ಎಸ್.ಪಾಟೀಲ, ಶ್ರೀಶೈಲ ಕರಿಶಂಕರಿ, ಎ.ಎಸ್.ಪಾವಟೆ, ರಂಗನಗೌಡ ದಂಡಣ್ಣವರ್, ಮಹಾಬಳೇಶ್ವರ ಗುಡಗುಂಟಿ, ಬಸವರಾಜ ಮುಕ್ಕುಪ್ಪಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net