ಡಿ.ಸಾಲುಂಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

9
Published on

ಮೈಸೂರು: ಮೈಸೂರು ತಾಲೂಕಿನ ಡಿ. ಸಾಲುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗೇಂದ್ರ ಹಾಗೂ ಉಪಾಧ್ಯಕ್ಷರಾಗಿ ಪ್ರೇಮಾಕುಮಾರಿ ಚುನಾಯಿತರಾದರು.
ಹಾಲು ಉತ್ಪಾದಕರ ಸಹಕಾರ ಸಂಘದ ಒಟ್ಟು 11 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗೇಂದ್ರ ಅವರಿಗೆ 7 ಮತಗಳು ಬಂದರೆ ಪ್ರತಿಸ್ಪರ್ಧಿ ಚಿಕ್ಕಬುದ್ಧಿ 4 ಮತ ಪಡೆದು ಸೋಲು ಅನುಭವಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರೇಮಾಕುಮಾರಿ 7 ಮತ ಪಡೆದರೆ, ಪ್ರತಿಸ್ಪರ್ಧಿ ಸಿ.ಭಾಸ್ಕರ್ 4 ಮತ ಗಳಿಸಿ ಪರಾಭವಗೊಂಡರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ.ಸಿದ್ದರಾಮೇಗೌಡ, ಮುಖಂಡರಾದ ಎಂ. ಚಂದ್ರ, ಬಿ. ಬಸವರಾಜು, ನಂಜುಂಡೇಗೌಡ, ಧನಗಳ್ಳಿ ಬಸವರಾಜು, ಮಂಚನಾಯ್ಕ, ಹುಚ್ಚಪ್ಪ, ಸಿಮೆಂಟ್ ಸಿದ್ದರಾಮೇಗೌಡ, ನಿರ್ದೇಶಕರಾದ ಹರಳೇಗೌಡ ಶಂಕರ, ಶ್ರೀಕಂಠ, ನಿಂಗಮ್ಮ, ಶಿವಮೂರ್ತಿ, ಸಿದ್ದರಾಮು, ಬಸವನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net