ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದ ಸಿ.ಟಿ.ರವಿ

c.t.ravi
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
Published on

ಚಿಕ್ಕಮಗಳೂರು: ಡಿಸಿಎಂಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ರೀತಿಯ ಅವಮಾನ ಸಹಿಸಿಕೊಂಡು ಡಿ.ಕೆ.ಶಿವಕುಮಾರ್ ಹೇಗೆ ಇರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟಾಂಗ್ ಕೊಟ್ಟರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಯಿಂದ ೧೩೬ ಮಂದಿ ಶಾಸಕರು ಗೆದ್ದಿದ್ದನ್ನು ಸಿಎಂ ಹೇಳಿಕೊಳ್ಳಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ಶಾಲಿನಲ್ಲಿ ಸುತ್ತಿಕೊಂಡು ಹೊಡೆದಂತಾಗಿದೆ. ಇದನ್ನು ಡಿ.ಕೆ. ಶಿವಕುಮಾರ್ ಸಹಿಸಿಕೊಂಡರೆ ಅವರ ವ್ಯಕ್ತಿತ್ವಕ್ಕೆ ಅಪಚಾರ ಎಂದರು.

ಸಿದ್ದರಾಮಯ್ಯ ಇಳಿಸಲು ನಾವು ಯಾರೂ ಪ್ರಯತ್ನ ಮಾಡುತ್ತಿಲ್ಲ. ನಿಮ್ಮಗಳ ವಿವಾದ ರಾಜ್ಯದ ಮೇಲೆ ಪರಿಣಾಮ ಬೀರಬಾರದು. ಭ್ರಷ್ಟಾಚಾರ ಮಾಡಲು ನಿಮಗೆ ಲೈಸನ್ಸ್ ಕೊಟ್ಟಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೀರಾ. ಇವೆರಡು ನಿಲ್ಲಿಸಿ ಒಳ್ಳೆಯ ಅಧಿಕಾರ ಕೊಡಿ. ಭ್ರಷ್ಟಾಚಾರ ನಿಮಗೆ, ಸರ್ಕಾರಕ್ಕೆ ಗೌರವ ತಂದು ಕೊಡುತ್ತದೆಯೇ ಎಂದು ಪ್ರಶ್ನಿಸಿದ ಅವರು, ಪಂಚ ಗ್ಯಾರಂಟಿ ನಂತರವೂ ಕೂಡ ಕಾಂಗ್ರೆಸ್‌ನ ಜನಪ್ರಿಯತೆ ಕಡಿಮೆಯಾಗಿದೆ. ಬೆಲೆ ಏರಿಕೆ ಬಿಟ್ಟು ರಾಜ್ಯವನ್ನು ಅಭಿವೃದ್ಧಿ ಪಡಿಸಬೇಕು. ಇದೇ ರೀತಿ ಅಡಳಿತ ನೀಡಿದರೆ ಕರ್ನಾಟಕ ಕಳೆದು ಹೋಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net