

ಕಳಸ: ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್. ರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಿ.ಆರ್.ರಾಜು ಸೋಮವಾರ ನಿಧನರಾದ ಹಿನ್ನೆಲೆಯಲ್ಲಿ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಳಸ ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಮಾತನಾಡಿ, ಡಿ.ಆರ್.ರಾಜು ನೇರ ನಡೆ-ನುಡಿಯ ಅಜಾತಶತ್ರು. ಕಳಸ ಬಿಲ್ಲವ ಸಂಘದಲ್ಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಅವರ ಮರಣ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು. ಬಿಲ್ಲವ ಸಂಘದ ಪ್ರಮುಖರಾದ ಎಂ.ಎ.ಶೇಷಗಿರಿ, ಚಂದ್ರಶೇಖರ, ಪೂರ್ಣಿಮಾ, ರಾಜು, ಬೇಬಿ ಹಿರೇಬೈಲ್, ಗುರುವಪ್ಪ, ರಾಜೇಂದ್ರ ಇತರರಿದ್ದರು.