

ಯಾದಗಿರಿ: ತಮ್ಮ ಅಕಾರ ಅವಯಲ್ಲಿ ಸಾಮಾಜಿಕ ಬದಲಾವಣೆ ತಂದಿದ್ದ ದಿ.ದೇವರಾಜ ಅರಸು ಅವರು ಕನರ್ಾಟಕ ಕಂಡ ರಾಜಕಾರಣಿಗಳಲ್ಲಿ ಒಬ್ಬ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಬಣ್ಣಿಸಿದರು.
ಭಾನುವಾರ ಇಲ್ಲಿನ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅರಸು ಅವರ 108ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂ ಸುಧಾರಣಾ ಕಾಯ್ದೆ, ಉಳುವವನೇ ಭೂಒಡೆಯ, ಜೀತದಾಳು ಪದ್ದತಿ ನಿಮರ್ೂಲನೆ, ಹಾವನೂರು ಆಯೋಗದ ರಚನೆಯಂಥ ಹಲವು ಮಹತ್ವದ ಕಾರ್ಯಕ್ರಮಗಳಿಗೆ ಅರಸು ಅವರು ಶ್ರೀಕಾರ ಹಾಕಿದವರು ಎಂದರು.
ಹಿಂದುಳಿದ ವರ್ಗಗಳ ಪಾಲಿಗೆ ಆಶಾಕಿರಣರಾಗಿ ಕನರ್ಾಟಕ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದವರು. ವಸತಿ ಶಾಲೆಗಳ ಸೌಲಭ್ಯ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಮಂತ ನಾಯಕರಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಶೋಷಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಲು ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಜಿಲ್ಲಾಕಾರಿ ಡಾ.ಸುಶೀಲಾ ಬಿ., ಮಾತನಾಡಿ, 1973 ನವೆಂಬರ್ 1 ರಂದು ಮೈಸೂರು ರಾಜ್ಯವನ್ನು ಕನರ್ಾಟಕ ಎಂದು ಮರು ನಾಮಕರಣ ಮಾಡಿ, ಆಡಳಿತದಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಿದ ಕೀತರ್ಿ ಅರಸು ಅವರಿಗೆ ಸಲ್ಲುತ್ತದೆ. 1974 ರಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಉಳುವವನನ್ನು ಹೊಲದೊಡೆಯನನ್ನಾಗಿ ಮಾಡಿ ಕ್ರಾಂತಿಕಾರಕ ಬದಲಾವಣೆ ತಂದರು ಎಂದರು.
ಸಾಹಿತಿ ಡಾ.ಶ್ರೀಶೈಲ ಪೂಜಾರಿ ವಿಶೇಷ ಉಪನ್ಯಾಸ ನೀಡಿ, ದೇವರಾಜ ಅರಸು ಅಕಾರದ ಅಡ್ಡಪಲ್ಲಕ್ಕಿಯಲ್ಲಿ ಎಂದೂ ಮೆರೆಯಲಿಲ್ಲ. ರಾಜ್ಯದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಮೆರೆದರು. ಸೇವೆ-ತ್ಯಾಗ ಅವರ ಬಾಳ ಉಸಿರಾಗಿತ್ತು. ಅವರು ಕರುಣಾಳು, ಸಮದುಃಖಿ. ಉರಿ ಬರಲಿ, ಸಿರಿ ಬರಲಿ ಅದನ್ನು ತಮ್ಮ ಜೀವನದಲ್ಲಿ ಸಮಚಿತ್ತದಿಂದ ಸ್ವೀಕರಿಸಿದರು ಎಂದು ಹೇಳಿದರು.