ಡಿ.9 ರಿಂದ ಸುತ್ತೂರಿನಲ್ಲಿ ಭಜನಾ ಕಾರ್ಯಾಗಾರ

Bhajana-1
ರಾಜಾಂಗಣದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಭಜನಾ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಸಹಸ್ರಕಂಠ ಗಾಯನ ನಡೆಯಿತು.
Published on

ಮೈಸೂರು: ಶ್ರೀ ಸುತ್ತೂರು ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ ಹಾಗೂ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಭಜನಾ ಕಾರ್ಯಾಗಾರವನ್ನು ಡಿ.9 ರಿಂದ 14ರವರೆಗೆ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಇದರಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಬಹುದಾಗಿದೆ. ವೈಯುಕ್ತಿಕವಾಗಿ ಆಸಕ್ತಿಯುಳ್ಳವರಿಗೂ ಅವಕಾಶವಿರುತ್ತದೆ.

ಭಜನೆಗಳನ್ನು ಹಾಡುವಾಗ ಗಮನಿಸಬೇಕಾದ ಶ್ರುತಿ, ರಾಗ, ತಾಳ, ಸಾಹಿತ್ಯ ಹಾಗೂ ಭಜನೆ ಮಾಡುತ್ತಾ ನೃತ್ಯ ಮಾಡುವ ಬಗ್ಗೆ ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿ ಭಜನಾ ತಂಡದಿಂದ ಹಾರ‌್ಮೋನಿಯಂ, ತಬಲ, ಖಂಜರ, ದಮ್ಮಡಿ ಕಲಾವಿದರು ಹಾಗೂ ಹಾಡುವವರು ಸೇರಿದಂತೆ ಐದು ಜನರು ಮಾತ್ರ ಭಾಗವಹಿಸಬಹುದಾಗಿವೆ.

ಭಾಗವಹಿಸಲು ಇಚ್ಛೆಯುಳ್ಳವರು ಬಿ.ರಾಜೇಶ್ ಅವರನ್ನು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದಲ್ಲಿ ನೇರವಾಗಿ ಅಥವಾ ದೂ. 0821-2548212 ಸಂಪರ್ಕಿಸಬಹುದು.

jsspublications@gmail.com ಇ-ಮೇಲ್ ಮೂಲಕವೂ ನೋಂದಾಯಿಸಿಕೊಳ್ಳಬಹುದಾಗಿದೆ. ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net