ಡಿ.8ರಂದು ಬದನಗುಪ್ಪೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

Power cutt
Published on
ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಚಾಮರಾಜನಗರ ಮತ್ತು ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿ. 8ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ತಾಲೂಕಿನ ಬದನಗುಪ್ಪೆ, ಪಣ್ಯದಹುಂಡಿ, ಬೆಂಡರವಾಡಿ, ಕೆಲ್ಲಂಬಳ್ಳಿ ಎನ್‌ಜೆವೈ, ಇಂಡಸ್ಟ್ರಿಯಲ್ ಏರಿಯಾ, ಕೆಇಡಿಪಿ 10 ಮತ್ತು 11, ಮುತ್ತಿಗೆ, ಹೆಗ್ಗೋಠಾರ ಹಾಗೂ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ ಮರಿಯಾಲ, ಬೇಡರಪುರ, ಕೆಲ್ಲಂಬಳ್ಳಿ, ಬಸವನಪುರ ಮತ್ತು ಹಿರಿಕೆರೆ, ಕಾಳಿಕಾಂಬ ಕಾಲೋನಿ, ಚಂದಕವಾಡಿ, ರೇಚಂಬಳ್ಳಿ, ಮಲ್ಲೇದೇವನಹಳ್ಳಿ, ನವೋದಯ, ಹೊಂಡರಬಾಳು, ಜ್ಯೋತಿಗೌಡನಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ 1912 ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net