ಡಿ. 6ಕ್ಕೆ ಭೀಮ ಜ್ಯೋತಿ ನಮನ

Bheema
Published on

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಪ್ರತಿಮೆ ಬಳಿ ಡಿ. 6ರಂದು ಸಂಜೆ 6ಕ್ಕೆ ಭೀಮಜ್ಯೋತಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭೀಮಯಾತ್ರೆ ಬಳಗದ ಸದಸ್ಯ ಸಿ.ಎಸ್.ರವೀಂದ್ರ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುದ್ದ, ಬಸವ, ಅಂಬೇಡ್ಕರ್ ತತ್ವದಡಿ ಕಾರ್ಯಕ್ರಮ ಆಯೋಜಿಸಿದ್ದು, ಅಂಬೇಡ್ಕರ್ ಅವರಿಗೆ ಗೌರವಿಸುವುದು ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿ ಸಮೂಹ, ಸಾಹಿತಿಗಳು, ವಿದ್ವಾಂಸರು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂಬೇಡ್ಕರ್ ಎಲ್ಲಾ ಜಾತಿ-ಧರ್ಮದವರಿಗೂ ಸಂವಿಧಾನದಲ್ಲಿ ಸಮಾನತೆ ನೀಡಿದ್ದಾರೆ. ಅವರನ್ನು ಒಂದು ಜಾತಿಗೆ ಯಾರೂ ಸೀಮಿತಗೊಳಿಸಬಾರದು. ಆದ್ದರಿಂದ ಸರ್ವರೂ ಸೇರಿ ಭೀಮಜ್ಯೋತಿ ನಮನ ಆಚರಿಸೋಣ ಎಂದು ಮನವಿ ಮಾಡಿದರು.

ವಕೀಲ ಜಿ.ಶರಣಪ್ಪ, ಈ.ಎಸ್.ರವಿಕುಮಾರ್, ಟಿ.ಸತೀಶ್, ಡಿ.ಕೆ.ಕುಮಾರಸ್ವಾಮಿ, ಆರ್.ಪ್ರಕಾಶ್, ಎಸ್.ಮಂಜಣ್ಣ,
ಟಿ.ರಘು ಜೆ.ಜೆ.ಹಟ್ಟಿ, ಕೃಷ್ಣಮೂರ್ತಿ, ಎಚ್.ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net