ಡಿ. 2ರಿಂದ ಕ್ರಡಾಯ್ ನಿಂದ ಟೆನ್ನಿಸ್ ಪಂದ್ಯಾವಳಿ

Published on

ಮೈಸೂರು: ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ರಾಷ್ಟ್ರೀಯ ಒಕ್ಕೂಟ (ಕ್ರಡಾಯ್)ದಿಂದ ಡಿಸೆಂಬರ್ 2ರಿಂದ 4ರವರೆಗೆ ನಗರದಲ್ಲಿ ರ‌್ಯಾಂಕಿಂಗ್ ಟೆನ್ನಿಸ್ ಪಂದ್ಯಾವಳಿ ಆಯೋಜಿಸಲಾಗಿದೆ.
ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾನಸಗಂಗೋತ್ರಿಯ ಎಸ್‌ಜೆಸಿಇ ಆವರಣದಲ್ಲಿರುವ ನಾಗರಾಜ್ ಟೆನ್ನಿಸ್ ಸೆಂಟರ್‌ನಲ್ಲಿ ಮೂರು ದಿನಗಳ ಕಾಲ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ರಡಾಯ್ ಮಹಿಳಾ ವಿಭಾಗದ ಅಧ್ಯಕ್ಷೆ ಪೂರ್ಣಿಮಾ ವಿಶ್ವನಾಥ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಟೆನ್ನಿಸ್ ಅಸೋಸಿಯೇಷನ್, ಕ್ರಡಾಯ್ ಮೈಸೂರು, ಮಹಿಳಾ ವಿಭಾಗ ಮತ್ತು ಕ್ರಡಾಯ್ ಯೂತ್ ವಿಂಗ್ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, 10, 12 ಮತ್ತು 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಭಾಗವಹಿಸಬಹುದು ಎಂದು ಹೇಳಿದರು.
ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ವಿವಿಧ ಭಾಗಗಳ 100ರಿಂದ 150ಕ್ಕೂ ಹೆಚ್ಚು ಮಕ್ಕಳು ಸ್ಪರ್ಧಿಸುವ ನಿರೀಕ್ಷೆಯಿದೆ. ನಿಯಮ ಮತ್ತು ನಿಬಂಧನೆಗಳ ಪ್ರಕಾರ ಪಂದ್ಯಾವಳಿ ನಡೆಯಲಿದ್ದು, ಆರ್.ನಾಗರಾಜ್ ಮುಖ್ಯ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಮೊ: 99805 60668, 98455 40506 ಸಂಪರ್ಕಿಸಬಹುದು ಎಂದು ಹೇಳಿದರು.
ಕ್ರಡಾಯ್ ಉಪಾಧ್ಯಕ್ಷ ಡಿ. ಶ್ರೀಹರಿ, ಕಾರ್ಯದರ್ಶಿ ಹರೀಶ್ ಶೆಣೈ, ಮಹಿಳಾ ವಿಭಾಗದ ಕಾರ್ಯದರ್ಶಿ ದಿವ್ಯಾ ಕುಮಾರಸ್ವಾಮಿ, ಖಜಾಂಚಿ ವಿಜಯ ಅಶ್ವಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net