ಡಿ.25ರಂದು ರೆಡ್ಡಿ ಜನಸಂಘದಿಂದ ಪ್ರತಿಭಾ ಪುರಸ್ಕಾರ

CTD TIPPAREDDI--02
Published on

ಚಿತ್ರದುರ್ಗ: ರೆಡ್ಡಿ ಜನಸಂಘದಿಂದ ಡಿ.25ರಂದು ಮಧ್ಯಾಹ್ನ 12 ಗಂಟೆಗೆ ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ 2022-23ನೇ ಸಾಲಿನ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂಥ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಸಮಾರಂಭವನ್ನು ಏರ್ಪ ಡಿಸಲಾಗಿದೆ.
ಮಾಜಿ ಶಾಸಕ, ರೆಡ್ಡಿ ಜನಸಂಘದ ಅಧ್ಯಕ್ಷ ಜಿ.ಎಚ್.ತಿಪ್ಪಾರೆಡ್ಡಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಘದ ಉಪಾಧ್ಯಕ್ಷ ಎಂ. ಕೆ.ಅನಂತರೆಡ್ಡಿ, ಕಾರ‌್ಯದರ್ಶಿಗಳಾದ ಜೆ.ಪರಶುರಾಮ, ಜಿ.ಟಿ.ವಿಶ್ವನಾಥ್, ಖಜಾಂಜಿ ಡಿ.ಕೆ.ಶೀಲಾ, ಡಿಡಿಪಿಐ ಕೆ.ರವಿಶಂಕರೆಡ್ಡಿ ಉಪಸ್ಥಿತರಿ ರುತ್ತಾರೆ. ಪಪೂ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪಿ.ಎನ್.ಕೃಷ್ಣಪ್ರಸಾದ್ ಉಪನ್ಯಾಸ ನೀಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net