

ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಗುಂಡ್ಲುಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿ.18ರಂದು ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗುಂಡ್ಲುಪೇಟೆ, ಬರಗಿ, ಕೋಡಿಹಳ್ಳಿ, ಬೇರಂಬಾಡಿ, ನೆನೆಕಟ್ಟೆ, ವೀರನಪುರ, ಬೊಮ್ಮನಹಳ್ಳಿ, ಕುಂದಗೆರೆ, ಕಟ್ನವಾಡಿ, ದೇಪಾಪುರ, ಎನ್.ಜೆ.ವೈ, ಗೋವಿಂದಪುರ, ಕಗ್ಗಳ, ಕೆಲಸಿಪುರ, ಲಕ್ಕೂರು, ಫ್ಯಾಕ್ಟರಿ, ವಾಟರ್ ಸಪ್ಲೈ ಮತ್ತು ಬೆಳವಾಡಿ, ಬಾಚಳ್ಳಿ, ಬೊಮ್ಮಲಾಪುರ, ದಾರಿಬೇಗೂರು, ಕೊಡಸೋಗೆ, ಹೆಗ್ಗವಾಡಿ, ಹಂಗಳ, ಶಿವಪುರ, ಕಲ್ಲಿಗೌಡನಹಳ್ಳಿ ಎನ್.ಜೆ.ವೈ, ಎಲಚಟ್ಟಿ, ಗೋಪಾಲ್‌ಪುರ ಎನ್.ಜೆ.ವೈ, ದೇವರಹಳ್ಳಿ, ಹೊನ್ನೇಗೌಡನಹಳ್ಳಿ, ಮಲ್ಲಯ್ಯನಪುರ ಹಾಗೂ ಹೊಂಗಹಳ್ಳಿ ಐಪಿ, ಮುಂಟಿಪುರ ಐಪಿ, ಹೆಚ್.ಎಸ್.ಹುಂಡಿ ಎನ್.ಜೆ.ವೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಉಚಿತ ದೂ.ಸಂ 1912 ಸಂಪರ್ಕಿಸುವಂತೆ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.