ಚಾಮರಾಜನಗರ: ತಾಲೂಕಿನ ಮುರುಘರಾಜೆಂದ್ರಸ್ವಾಮಿ ಮಹಾಸಂಸ್ಥಾನ ಶ್ರೀಮಠದ ವತಿಯಿಂದ ಡಿ.16 ಮತ್ತು 17ರಂದು ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಸದ್ಗುರು ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರ 108ನೇ ವರ್ಷದ ಆರಾಧನೆ ಹಾಗೂ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಡಿ.16ರಂದು ರಾತ್ರಿ 10 ಗಂಟೆಗೆ ವಿಶ್ವಗುರು ಬಸವಣ್ಣ ಮತ್ತು ಮುರುಘರಾಜೇಂದ್ರ ಶ್ರೀಗಳ ಭಾವಚಿತ್ರ ಮೆರವಣಿಗೆ, ವಚನ ಸಂಪುಟ ಮತ್ತು ಜಂಗಮ ಪುಷ್ಪಾಂದೋಲಿಕಾ ಮಹೋತ್ಸವವು ಶಿವಭಜನೆ, ನಾದಸ್ವರ, ನಂದಿಧ್ವಜ, ವೀರಗಾಸೆ ಮುಂತಾದ ಕಲಾತಂಡಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಲಿದೆ.
ಡಿ.17ರಂದು ಪ್ರಾತಃಕಾಲ 4 ಗಂಟೆಗೆ ಕರ್ತೃಗದ್ದುಗೆಗಳಿಗೆ ಪೂಜೆ, ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಷಟ್‌ಸ್ಥಲಧ್ವಜಾರೋಹಣ ಮತ್ತು ಶರಣತತ್ತ್ವ ಸಿಂಚನ, 7.30ಕ್ಕೆ ದಿವ್ಯ ಪಾದಪೂಜೆ, 10.30ಕ್ಕೆ ಧಾರ್ಮಿಕ ಪ್ರವಚನ ನಡೆಯಲಿದೆ. ರಾತ್ರಿ 10 ಗಂಟೆಗೆ ಮೇಲಾಜಿಪುರ ಗ್ರಾಮದ ಶ್ರೀಗುರುಮಲ್ಲೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರಿಂದ ‘ಶ್ರೀ ಬಸವರಾಜವಿಜಯ’ ಎಂಬ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಮಠಾಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.