

ಚಾಮರಾಜನಗರ: ಇಲ್ಲಿನ ಕೊಳದ ಬೀದಿಯಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಕಾಡು ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಡಿ.15ರಂದು ವಿಷ್ಣು ದೀಪೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಗೆ ಹುಣ್ಣಿಮೆ ಪ್ರಯುಕ್ತ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, 12 ಗಂಟೆಗೆ ಮಹಾ ಮಂಗಳಾರತಿ, ಸಂಜೆ 7 ಗಂಟೆಗೆ ವಿಷ್ಣು ದೀಪೋತ್ಸವ, ನಂತರ 8 ಗಂಟೆಗೆ ದೇವಸ್ಥಾನದ ಆವರಣದಲ್ಲಿ ದೇವರ ಉತ್ಸವವನ್ನು ನಡೆಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಹಾಗೂ ಈ ಕಾರ್ಯಕ್ರಮಕ್ಕೆ ಎಣ್ಣೆ ದೀಪದ ಬತ್ತಿ, ಅಕ್ಕಿ ಕೊಡಬಹುದೆಂದು ಅರ್ಚಕ ರಾಮಚಂದ್ರ ಮನವಿ ಮಾಡಿದ್ದಾರೆ.