

ಹಾಸನ: ದೇಶದ ಸವಾರ್ಂಗೀಣ ಪ್ರಗತಿಯಿಂದ ಮಾತ್ರ ಎಲ್ಲರ ಏಳಿಗೆ ಸಾಧ್ಯ, ಎಂಬ ದ್ಯೆಯ ವಾಕ್ಯದೊಂದಿಗೆ ಸಾಮಾಜಿಕ ಸುಧಾರಣೆ ಹಾಗೂ ಅಭಿವೃದ್ದಿ ಕೆಲಸ ಮಾಡಿದ ಮಾಜಿ ಉಪ ಪ್ರಧಾನಿ ಡಾ:ಬಾಬು ಜಗಜೀವನ್‌ರಾಮ್‌ರ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗದಲ್ಲಿ ಗುರುವಾರ ಬಾಬು ಜಗಜೀವನ್‌ರಾಮ್‌ರವರ 37ನೆ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ನಂತರ ಮಾತನಾಡಿದ ಅವರು, ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರೇ ಎಲ್ಲಾರು ವೈಯಕ್ತಿಕ ಪ್ರಗತಿ ಕೂಡ ಆಗುತ್ತದೆ ಎಂಬ ಮನೋಭಾವನೆ ಹೊಂದಿದ್ದ ಅವರು ಪ್ರಪ್ರಥಮವಾಗಿ ದಲಿತರಿಗೆ ರೈಲ್ವೆ ಇಲಾಖೆಯಲ್ಲಿ ಮೀಸಲಾತಿ ನೀಡಿ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದರು.
ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದ ಹಸಿವು ನೀಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು, ನದಿ ನೀರಿನ ಹಂಚಿಕೆ ವಿಚಾರದಲ್ಲಿ ವಿವಿಧ ರಾಜ್ಯಗಳ ನಡುವೆ ಇದ್ದ ಗೊಂದಲ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೂಡ ಅವರ ಕೊಡುಗೆ ಅಪಾರವಾಗಿದೆ.ಅವರ ಕೊಡುಗೆಗಳನ್ನು ಸ್ಮರಣೆ ಮಾಡುವುದು ಮಾತ್ರವಲ್ಲದೆ ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ದಲಿತ ಮುಖಂಡ ಎಚ್.ಕೆ. ಸಂದೇಶ್ ಮಾತನಾಡಿ, ಬಾಬು ಡಾ:ಬಾಬು ಜಗಜೀವನ್‌ರಾಮ್‌ರವರ ಅವರ ಹೊಂದಿದ ಸಾಮಾಜಿಕ ಕಳಕಳಿ ಹಾಗೂ ಅವರು ನಡೆದು ಬಂದ ಜೀವನದ ಹಾದಿನ್ನ ಜನ ಸಾಮಾನ್ಯರಿಗೆ ತಿಳಿಸುವಂತೆ ಮನವಿ ಮಾಡಿದರು.
ಮಾದಿಗ ದಂಡೋರ ಮುಖಂಡ ಶಂಕರ್ ರಾಜ್ ಅವರು ಮಾತನಾಡಿ, ಜಗಜೀವನ್‌ರಾಮ್ ರವರ ಭವನ ನಗರದಲ್ಲಿ ನಿರ್ಮಾಣ ಮಾಡಬೇಕು ಎಂದು ಈ ವೇಳೆಯಲ್ಲಿ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಹಿರಿಯ ಸ್ವಾತಂತ್ರ ಹೋರಾಟಗಾರ ಶಿವಣ್ಣ, ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ದಲಿತ ಮುಖಂಡರಾದ ಈರಪ್ಪ, ಕುಮಾರಸ್ವಾಮಿ, ರಾಜೇಶ್ ಹಾಗೂ ಮತ್ತಿತರರು ಹಾಜರಿದ್ದರು.