ಡಾಕ್ಟರ್ ಇಂಜಿನಿಯರಗಳಿಗೆ ಇಲ್ಲದ ಪರೀಕ್ಷೆ ನಮಗೇಕೆ ?

11 ydg 07
Published on

ಶಹಾಪುರ: ಕಾನೂನು ಪದವಿ ಪಡೆದವರು, ವಕೀಲಿ ವೃತ್ತಿ ನಡೆಸಲು ಅಖಿಲ ಭಾರತ ವಕೀಲರ ಅರ್ಹತಾ ಪರೀಕ್ಷೆ ನಡೆಸುತ್ತಿರುವುದನ್ನುರದ್ದುಪಡಿಸಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀನಿವಾಸ ಕುಮಾರ ಆಗ್ರಹಿಸಿದರು.

ನಗರದಲ್ಲಿ ವಕೀಲರ ಸಭೆಯಲ್ಲಿ ಮಾತನಾಡಿ, ವೈದ್ಯಕೀಯ ಹಾಗೂ ಇಂಜಿನಿಯರಿAಗ್ ಪದವಿ ಪಡೆದವರಿಗೆ ಇಲ್ಲದ ಪರೀಕ್ಷೆ ವಕೀಲರಿಗೆ ಯಾಕೆ ಎಂದು ಪ್ರಶ್ನಿಸಿದರು.ಕಾನೂನು ಪದವಿ ಪಡೆದವರ ಭವಿಷ್ಯದ ಜತೆ ಚಲ್ಲಾಟ ಆಡುವುದು ಸರಿಯಲ್ಲ.ಈ ಕೂಡಲೇ ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾನೂನು ಪದವಿ ಪಡೆದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟ ಆಡುವುದು ಸರಿಯಲ್ಲ. ನ್ಯಾಯಾಧೀಶರ ಪರೀಕ್ಷೆ ಬರೆಯಲು ಕನಿಷ್ಠ ಮೂರು ವರ್ಷ ವಕೀಲ ವೃತ್ತಿ ನಡೆಸಿರಬೇಕು. ಯುವ ವಕೀಲರಿಗೆ ಪ್ರತಿ ತಿಂಗಳು ೧೦ ಸಾ.ರೂ. ಆರ್ಥಿಕ ನೆರವು ನೀಡಬೇಕು, ಜೀವ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು. ವಕೀಲರ ಸಂಘಕ್ಕೆ ಪ್ರತಿ ವರ್ಷ ೫೦ ಸಾವಿರ ಧನ ಸಹಾಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳೊಂದಿಗೆ ಮುಂದಿನ ತಿಂಗಳ ಹೋರಾಟ ನಡೆಸಲಾಗುತ್ತದೆ ಎಂದು ಶ್ರೀನಿವಾಸಕುಮಾರ ಹೇಳಿದರು.

ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಸಂಚಾಲಕ ಆರ್.ಚೆನ್ನಬಸ್ಸು ವನದುರ್ಗ ಮಾತನಾಡಿ, ವಕೀಲರ ಸಂರಕ್ಷಣೆ ಕಾಯ್ದೆ ಜಾರಿ ಮಾಡಿ ವಕೀಲರು ವೃತ್ತಿಯಲ್ಲಿ ಭಯಮುಕ್ತದಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ವಕೀಲರ ಹೆಸರಿನಲ್ಲಿ ಕಾನೂನು ದುರ್ಬಳಕೆ ಮಾಡಿಕೊಂಡು ಹೆದರಿಸುವ ವ್ಯಕ್ತಿಗಳ ಬಗ್ಗೆ ಜನರು ಎಚ್ಚರವಾಗಿರಬೇಕು ಎಂದರು.

ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಸೈಯ್ಯದ್ ಇಬ್ರಾಹಿಂಸಾಬ್ ಜಮಾದಾರ್,ನ್ಯಾಯವಾದಿಗಳಾದ ಜೈಲಾಲ್ ತೋಟದಮನೆ, ಯೂಸೂಫ್ ಸಿದ್ದಕಿ, ದೇವರಾಜ ಚೆಟ್ಟಿ, ರಾಜೇಂದ್ರಕುಮಾರ ಸಾಗರ, ಶರಣರಾಜ, ಚಂದ್ರಶೇಖರ ಜಾಧವ, ಭೀಮಣ್ಣಗೌಡ, ಮಲ್ಲಪ್ಪ ಪೂಜಾರಿ, ಬಿಲ್ಕಿಷ್ ಫಾತೀಮಾ, ಅಯಿಷಾ ರ‍್ವಿನ್ ಜಮಖಂಡಿ, ಸಿದ್ರಾಮಪ್ಪ ಹೊಸಮನಿ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ ಮೊದಲಾದವರಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net