ಡಾ.ಸೂರಜ್ ರೇವಣ್ಣ  ಕಪ್ 3.0 ಕಬ್ಬಡಿ ಪಂದ್ಯಾವಳಿ

ಡಾ.ಸೂರಜ್ ರೇವಣ್ಣ  ಕಪ್ 3.0 ಕಬ್ಬಡಿ ಪಂದ್ಯಾವಳಿ
Published on

ಚನ್ನರಾಯಪಟ್ಟಣ : ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣನವರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿರುವ ಡಾ.ಸೂರಜ್ ರೇವಣ್ಣ  ಕಪ್ 3.0 ಕಬ್ಬಡಿ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು  ಪಟ್ಟಣದಲ್ಲಿ ಬುಧವಾರ  ರೋಡ್ ಷೋ ನಡೆಸಿದರು.

ಪಟ್ಟಣ ನವೋದಯ  ವೃತ್ತದ ಮೂಲಕ ಮಾಧ್ಯಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದ ಸ್ಥಳದವರೆಗೆ ರೋಡ್ ಷೋ ನಡೆಸಿದರು. ದೇವೇಗೌಡರನ್ನು  ಕಣ್ತುಂಬಿಕೊಳ್ಳಲು ನವೋದಯ  ವೃತ್ತದಲ್ಲಿ ಸಾವಿರಾರು ಜ‌ನ ಸೇರಿದ್ದರು.
ನವೋದಯ  ವೃತ್ತದಲ್ಲಿ ದೇವೇಗೌಡರಿಗೆ ಬೃಹತ್ ಗಾತ್ರದ  ಚೆರ್ರಿ ಹಣ್ಣಿನ ಹಾರ ಹಾಕಿ ಹೆಲಿಕಾಪ್ಟರ್ ಹಾಗೂ  ಜೆಸಿಬಿ ಮೂಲಕ ಹೂಮಳೆಗರೆಯಲಾಯಿತು. ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು.

ಶಾಸಕ  ಸಿ ಎನ್ ಬಾಲಕೃಷ್ಣ,ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ತಾಲ್ಲೂಕಿನ ಎಲ್ಲ ಮುಖಂಡರು ಭಾಗವಹಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net