ಡಾ.ಸೀಮಾ ಪ್ರಥಮ,ನಾಗಶ್ರೀಗೆ 6ನೇ ರ‌್ಯಾಂಕ್

CTD 6 SJM (1)--0008
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ಕ್ಯಾಂಪಸ್ ಬಿಚ್ಚುಗತ್ತಿ ಭರಮಣ್ಣನಾಯಕ ಸಭಾಂಗಣದಲ್ಲ್ಲಿ ಶನಿವಾರ ಬಸವೇಶ್ವರ ವೈದ್ಯಕೀಯ ಕಾಲೇಜಿನ 16ನೇ ಪದವಿ ಪ್ರ ದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ 100 ಸ್ನಾತಕ ಮತ್ತು 28 ಸ್ನಾತಕೋತ್ತರ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಕಾಲೇಜಿನ ಡಾ.ಸೀಮಾಮೇರಿಯಂ ಅವರು ಸ್ನಾತಕೋತ್ತರ ನೇತ್ರ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕಿನೊಂದಿಗೆ ಬಂಗಾರದ ಪದ ಕಕ್ಕೆ ಭಾಜನರಾದರು.
ಕೇರಳ ಪಾಲಕ್ಕಾಡ್‌ನ ಸೀಮಾ ಅವರು ಮೊಹಮ್ಮದ್‌ನಾಸೀರ್ ಹಾಗೂ ಅನೀಸ್‌ಕೌಸರ್ ಅವರ ಪುತ್ರಿ.ತುಮಕೂರಿನ ಡಾ.ಬಿ.ಎನ್.ನಾಗಶ್ರೀ ಅ ವರು ನೇತ್ರ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ‌್ಯಾಂಕ್ ಪಡೆದಿದ್ದಾರೆ. ಡಾ.ಶ್ರೀಧರ್ ಅವರ ಪತ್ನಿ ನಾಗಶ್ರೀ,ತುಮಕೂರಿನ ನಂಜಪ್ಪ ಹಾಗೂ ಭಾ ರತಿ ಅವರ ಪುತ್ರಿ.
ಸಮಾರಂಭದ ಸಾನ್ನಿಧ್ಯವನ್ನು ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ,ಡಾ.ಬಸವಕುಮಾರಸ್ವಾಮೀಜಿ,ಎಸ್‌ಜೆಎಂ ವಿದ್ಯಾಪೀಠದ ಅಧ್ಯ ಕ್ಷ ಶಿವಯೋಗಿ.ಸಿ.ಕಳಸದ,ಸದಸ್ಯ ಚಂದ್ರಶೇಖರ,ಜೆಎಸ್‌ಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೀಂದರ್‌ಸಿಂಗ್,ರಾಜೀವ್‌ಗಾಂಧಿ ವಿವಿ ಕುಲಸಚಿವ ಡಾ.ರಿಯಾಜ್‌ಬಾಷ,ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತ ರಾಥೋಡ್,ಡೀನ್ ಡಾ.ಜಿ.ಪ್ರಶಾಂತ್,ಅಧೀಕ್ಷಕ ಡಾ.ಪಾಲಾ ಕ್ಷಯ್ಯ,ಡಾ.ಎಂ.ಎಸ್.ರಾಜೇಶ್,ಡಾ.ನಾರಾಯಣಮೂರ್ತಿ,ಡಾ.ಲಾವಣ್ಯ,ಡಾ.ಧರ್ಮರಾಜ್,ಡಾ.ಸುಮಂತ್,ಡಾ.ಕೊಟ್ರೇಶ್, ಡಾ.ಗೌಸ್ ಪಾಷ,ಡಾ.ಬಸವರಾಜ ಸವದಿ, ಡಾ. ರಾಮು,ಡಾ.ಸತೀಶ್,ಡಾ.ಅಶ್ವಿನಿ,ಡಾ.ಅಮೃತ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net