ಡಾ.ಶಿವರಾಮ ಕಾರಂತ ಅವರ ಕಾದಂಬರಿ ಆಧಾರಿತ ಅಳಿದ ಮೇಲೆ ನಾಟಕ ಪ್ರದರ್ಶನ

Drama-games
Published on

ಮೈಸೂರು: ಕಲಾ ಸುರುಚಿ ಸಂಸ್ಥೆಯು ಡಾ.ಶಿವರಾಮ ಕಾರಂತ ಅವರ ಕಾದಂಬರಿ ಆಧಾರಿತ ಅಳಿದ ಮೇಲೆ ನಾಟಕ ಪ್ರದರ್ಶನವನ್ನು ಮೇ 12 ರಂದು ಸಂಜೆ 6.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಪ್ರದರ್ಶನ ನಡೆಯಲಿದೆ.

ಶಶಿಧರ ಡೋಂಗ್ರೆ ರಂಗರೂಪಕ್ಕೆ ತಂದಿರುವ ಈ ನಾಟಕವನ್ನು ಪ್ರೊ.ಎಚ್.ಎಸ್.ಉಮೇಶ್ ನಿರ್ದೇಶಿಸಿದ್ದಾರೆ. ಶಿವರಾಮಕಾರಂತರ ವಿಶಿಷ್ಟ ಕೃತಿ ಅಳಿದ ಮೇಲೆ. ಅವರ ಅಧ್ಯಯನ, ಚಿಂತನೆ, ರಚನಾ ಸಾಮರ್ಥ್ಯಕ್ಕೆ ಒಳ್ಳೆಯ ನಿದರ್ಶನ ಈ ಕಾದಂಬರಿಯು ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net