

ಬೇಲೂರು: ಡಾ.ಶಿವಕುಮಾರ್ ಸ್ವಾಮೀಜಿಯವರ 4 ನೇ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮವನ್ನು ತಾಲೂಕಿನ ಅರೇಹಳ್ಳಿಯ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಭಕ್ತರು ನೆರವೇರಿಸಿದರು.
ಸಿದ್ಧಗಂಗಾ ಮಠದ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ.ಶಿವಕುಮಾರ್ ಸ್ವಾಮೀಜಿಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರು ಪ್ರಾರ್ಥನಾ ಗೀತೆಗಳನ್ನು ಹಾಡಿದರು. ನೆರೆದಿದ್ದ ಭಕ್ತರು ಶ್ರೀಗಳ ಪರ ಘೋಷಣೆಗಳನ್ನೂ ಕೂಗುವುದರ ಮೂಲಕ ಅಭಿಮಾನ ಮೆರೆದರು. ಕಾರ್ಯಕ್ರಮದ ನಂತರ ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು.
ಯೋಗೇಶ್, ಭರತ್, ಮಹೇಶ್, ಎಂ.ಡಿ.ಚಂದ್ರು, ಶಿವಣ್ಣ, ಟಿ.ಪಿ.ಮಲ್ಲೇಶ್, ರವಿಶಾಸ್ತ್ರಿ, ವಿನಯ್ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳಿದ್ದರು.