ಡಾ.ಶಿವಕುಮಾರಸ್ವಾಮೀಜಿ ಅವರ 118ನೇ ವರ್ಷದ ಜನ್ಮ ದಿನಾಚರಣೆ

01rajesh7
Published on

ಸಂತೇಮರಹಳ್ಳಿ: ತಾಲೂಕಿನ ಹೆಗ್ಗವಾಡಿಪುರ ಗ್ರಾಮದಲ್ಲಿ ಮಂಗಳವಾರ ಡಾ.ಶಿವಕುಮಾರಸ್ವಾಮೀಜಿ ಅವರ 118ನೇ ವರ್ಷದ ಜನ್ಮ ದಿನಾಚರಣೆ ಆಚರಿಸಲಾಯಿತು. ಡಾ.ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಗ್ರಾಮದ ಎಲ್ಲ ಸಮುದಾಯ ಮುಖಂಡರು ಪುಷ್ಪರ್ಚಾನೆ ನೆರವೇರಿಸಿದರು.

ರೈತ ಮುಖಂಡ ಎಚ್.ಎಸ್.ಮಹೇಶ್‌ಕುಮಾರ್ ಮಾತನಾಡಿ, ಡಾ.ಶಿವಕುಮಾರ್‌ಸ್ವಾಮೀಜಿ ದೇಶ ಕಂಡ ಮಹಾನ್ ವ್ಯಕ್ತಿ, ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿರುವ ಮಹಾನ್ ಚೇತನ ಅರಸಿ ಬಂದವರಿಗೆ ಆಶಾಕಿರವಾಗಿ ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳಲ್ಲಿ ದೇವರನ್ನು ಕಂಡ ಮಹಸಂತರು. ಪ್ರಭುದ್ದ ಸಮಾಜಕ್ಕೆ ನಂದದೀಪವಾಗಿ ಅಕ್ಷರದ ಜೊತೆಗೆ ಸಂಸ್ಕಾರ ಕಲಿಸಿ ಜಾತಿ ಧರ್ಮ ಮತಗಳ ಬೇದವಿಲ್ಲದೆ ಜಗದ ಜಂಗಮರಾಗಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಮಹಾಪುರಷ ಎಂದರು.

ಮುಖಂಡ ಎನ್.ರಿ.ಮಹದೇವಸ್ವಾಮಿ ಮಾತನಾಡಿ, ಡಾ.ಶಿವಕುಮಾರಸ್ವಾಮೀಜಿ ಅವರ ಜನ್ಮ ದಿನಾಚರಣೆಯನ್ನು ಅನ್ನ ದಾಸೋಹ, ಪಾನಕ, ಮಜ್ಜಿಗೆ ನೀಡಿ ಅವರ ಜನ್ಮ ದಿನಾಚರಣೆ ಆಚರಿಸಿದರೆ ಸಾಲದು. ಮುಂದಿನ ದಿನಗಳಲ್ಲಿ ಅವರ ಜನ್ಮ ದಿನದಂದು ಅವರ ಆಚಾರ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಜ್ಜಿಗೆ, ಪಾನಕ ವಿತರಿಸಲಾಯಿತು. ಮುಖಂಡರಾದ ಶ್ರೀಕಂಠಶರ್ಮ, ಎಚ್.ಎಸ್.ಅಜಯ್, ಶಿವಕುಮಾರ್, ಎಚ್.ಎಸ್.ಓಂಕಾರ್, ಗಾಡಿಮಹೇಶ್, ಪ್ರದೀಪ್, ಪ್ರಸಾದ್, ವಿನಯ್, ಎಸ್.ಸುಮಕು, ಮಲ್ಲರಾಜು, ಮನು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net