ಡಾ. ವಿಜೇತಾಗೆ ‘ಶೀ ಏಷಿಯಾ’ ಪ್ರಶಸ್ತಿ

h7-dr. vijeta
Published on

ಹುಬ್ಬಳ್ಳಿ: ಅರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಟ್ವೆಲ್ ಗ್ಲೋಬಲ್ ಮ್ಯಾಗಜಿನ್ ಹಾಗೂ ತಮಿಳುನಾಡಿನ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಆಶ್ರಯದಲ್ಲಿ ನೀಡಲಾಗುವ ‘ಶೀ ಏಷಿಯಾ’ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹುಬ್ಬಳ್ಳಿಯ ಫಿಜಿಯೋಥೆರೆಪಿಸ್ಟ್ ಮತ್ತು ಹೆಲ್ತ್ ಕೋಚ್ ಡಾ. ವಿಜೇತಾ ಹಳೇಪೇಟ ಹರಪನಹಳ್ಳಿ ಅವರು ಭಾಜನರಾಗಿದ್ದಾರೆ.

ಗೋವಾದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ದೇಶಗಳಿಂದ ಗಣ್ಯರು, ಪ್ರಶಸ್ತಿ ಪುರಸ್ಕೃತರು ಆಗಮಿಸಿದ್ದರು.

ಗೋಕುಲ ರಸ್ತೆಯ ಗುಂಡಿ ಪ್ಲಾಜಾದಲ್ಲಿ ‘ಸತ್ವಂ ಫಿಜಿಯೋಥೆರೆಪಿ ಆಂಡ್ ಹೆಲ್ತ್ ಕ್ಲಿನಿಕ್’ ಸ್ಥಾಪನೆ ಮಾಡಿದ್ದು, 12ಕ್ಕೂ ಹೆಚ್ಚು ವರ್ಷಗಳಿಂದ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ರೋಗಿಗಳು ಮತ್ತು ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಆನ್​ಲೈನ್ ಮೂಲಕ ತರಬೇತಿ, ಪಾಠ, ಚಿಕಿತ್ಸೆ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net