ಮೈಸೂರು: ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್‌ನಿಂದ ಅ.23 ರಂದು ನಗರದಲ್ಲಿ ಸಿಂಹದ ಧ್ವನಿ ಡಾ.ವಿಷ್ಣುವರ್ಧನ್ ಸಂಭ್ರಮ ಎಂಬ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮ್ಯೂಸಿಕಲ್ ಗ್ರೂಪ್ ಮುಖ್ಯಸ್ಥ ಬಿ.ಎಸ್.ಜಯರಾಮರಾಜು ತಿಳಿಸಿದರು.
ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 5ಕ್ಕೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಮೇಲುಕೋಟೆ ವಂಗೀಮಠದ ಇಳೈ ಆಳ್ವಾರ್ ಸ್ವಾಮಿ ಸಾನ್ನಿಧ್ಯ ವಹಿಸುವರು. ನಗರಪಾಲಿಕೆ ಸದಸ್ಯೆ ವೇದಾವತಿ ಶಿವಶಂಕರ್, ಸಮಾಜ ಸೇವಕ ರಘುರಾಂ ವಾಜಪೇಯಿ, ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಸೇರಿದಂತೆ ಹಲವರು ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ವಿಷ್ಣುವರ್ಧನ್ ಅವರ ಚಲನಚಿತ್ರಗಳ ಆಯ್ದ ಗೀತೆಗಳನ್ನು ನೈಜ ವಾದ್ಯಗೋಷ್ಠಿಯಲ್ಲಿ ಪ್ರಸ್ತುತಪಡಿಸಲಾಗುವುದು. ಬಾಲು ಪ್ರಕಾಶ್, ಚಂದ್ರಶೇಖರ್, ಶ್ರೀನಿವಾಸ್, ಸರ್ವಮಂಗಳಾ, ವಾಣಿ, ಧನ್ಯ ಇತರರು ಗಾಯನ ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು.
ಗ್ರೂಪ್‌ನ ಬಾಲು ಪ್ರಕಾಶ್, ಚಂದ್ರಶೇಖರ್, ಸುರೇಶ್, ಸುಧೀಂದ್ರ ಇತರರು ಇದ್ದರು.