

ಮೈಸೂರು: ಗೆಜ್ಜೆಹೆಜ್ಜೆ ರಂಗ ತಂಡದ ವತಿಯಿಂದ ಲೇಖಕಿ ಸುಧಾ ರಮೇಶ್ ಕುಮಾರ್ ಅವರು ಕನ್ನಡ ಚಿತ್ರರಂಗದ ಮೇರು ನಟ ದಿವಂಗತ ಡಾ. ರಾಜ್‌ಕುಮಾರ್ ಬಗ್ಗೆ ಬರೆದಿರುವ ‘ಡಾ.ರಾಜ್‌ಕುಮಾರ್ ನಡೆದುಬಂದ ಹಾದಿ’ ಕೃತಿ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಯಿತು.
ರಂಗ ತಂಡದ ಸಂಸ್ಥಾಪಕ ವಿ.ಉದಯ್‌ಕುಮಾರ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರ ಬಗ್ಗೆ ಸಮಗ್ರವಾಗಿ ಅಲ್ಲದಿದ್ದರೂ ತಮಗೆ ತಿಳಿದಿದ್ದನ್ನು ಇಲ್ಲಿ ಲೇಖಕಿ ಬರೆದಿದ್ದಾರೆ. ಡಾ. ರಾಜ್‌ಕುಮಾರ್ ಅವರ ಬಗ್ಗೆ ಬರೆದಷ್ಟೂ ಮುಗಿಯುವುದೇ ಇಲ್ಲ. ಆದರೂ ಇದೊಂದು ಉತ್ತಮ ಪ್ರಯತ್ನವಾಗಿದೆ. ಅಲ್ಲದೆ, ಗೃಹಿಣಿಯಾಗಿದ್ದರೂ ಬಿಡುವು ಮಾಡಿಕೊಂಡು ಪುಸ್ತಕ ರಚಿಸಲು ಮುಂದಾದುದು ಸ್ವಾಗತಾರ್ಹ ಎಂದರು.
ಲೇಖಕಿ ಸುಧಾ ರಮೇಶ್‌ಕುಮಾರ್, ರಂಗ ತಂಡದ ಎಲ್.ಯಶೋಧಾ, ಮಾಧವ ಆಚಾರ್, ಬಿ.ಕೆ.ಲೋಕೇಶ್, ಛಾಯಾಗ್ರಾಹಕ ಲೋಕೇಶ್ ಹಾಜರಿದ್ದರು.