ಡಾ. ರಾಜ್ ನಟನೆಯ ಚಿತ್ರಗಳು ಯುವಕರಿಗೆ ಪ್ರೇರಣೆ

25 ckm 4
ಚಿಕ್ಕಮಗಳೂರು ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಕನ್ನಡಸೇನೆಯಿಂದ ಆಯೋಜಿಸಿದ್ಧ ವರನಟ ಡಾ. ರಾಜ್‌ಕುಮಾರ್ ೯೭ನೇ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪಿ.ಸಿ.ರಾಜೇಗೌಡ, ಸುಜಾತ ಶಿವಕುಮಾರ್, ಎಂ.ಸಿ.ಶಿವಾನAದ ಸ್ವಾಮಿ, ರೇಷ್ಮಾ, ಟಿ.ರಾಜಶೇಖರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಾಡಿನ ಪ್ರಬುದ್ಧ ನಟ ಡಾ. ರಾಜ್‌ಕುಮಾರ್ ಜೀವನಯುದ್ದಕ್ಕೂ ಕನ್ನಡ ಚಿತ್ರಗಳಲ್ಲಿ ನಟಿಸಿ, ನಾಡಿನ ಪರವಾದ ಹೋರಾಟಗಳಲ್ಲಿ ಭಾಗಿಯಾಗಿ ಸದಾಕಾಲ ಭುವನೇಶ್ವರಿ ತಾಯಿಯ ಸೇವೆ ಮಾಡಿದ್ದಾರೆ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಕನ್ನಡಸೇನೆಯಿಂದ ಆಯೋಜಿಸಿದ್ಧ ವರನಟ ಡಾ. ರಾಜ್‌ಕುಮಾರ್ ೯೭ನೇ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜನತೆ ಮನಸ್ಸಿನಲ್ಲಿ ನೆಲೆಯೂರುವಂಥ ಚಲನಚಿತ್ರಗಳಲ್ಲಿ ನಟಿಸಿ ಮನ್ನಣೆ ಗಳಿಸಿದವರು ಡಾ. ರಾಜ್‌ಕುಮಾರ್. ಪ್ರತಿ ಚಿತ್ರಗಳಲ್ಲಿ ಒಂದಿಲ್ಲೊAದು ಸಂದೇಶಗಳು ಅಡಕವಾಗಿದ್ದು, ಸಕುಟುಂಬ ಸಮೇತ ಇವರ ಚಿತ್ರಗಳನ್ನು ವೀಕ್ಷಿಸಬಹುದು. ಹೀಗಾಗಿಯೇ ಡಾ. ರಾಜ್ ಪ್ರೀತಿದಾಯಕ ನಟರಾಗಿ ಹೊರಹೊಮ್ಮಿದ್ದರು ಎಂದರು.

ರಾಜಕೀಯ, ಪರಭಾಷೆಗಳಲ್ಲಿ ಹಲವಾರು ಅವಕಾಶ ಲಭಿಸಿದರೂ ಯಾವುದಕ್ಕೂ ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ. ಕನ್ನಡ ಚಿತ್ರಗಳಲ್ಲಿ ನಟಿಸಿ ಅಪ್ಪಟ ಕನ್ನಡಾಭಿಮಾನ ತೋರಿದ ಹೆಮ್ಮೆಯ ನಟ ಎಂದರೆ ತಪ್ಪಾಗಲಾರದು. ಇಂದಿಗೂ ರಾಜ್ ಅವರ ಕುಟುಂಬವು ಕಲಾದೇವಿಯ ಸೇವೆಯಲ್ಲಿ ತೊಡಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಡಾ. ರಾಜ್‌ಕುಮಾರ್ ಜೀವನಚೈತ್ರ ಚಲನಚಿತ್ರದಿಂದ ಅನೇಕರು ಮದ್ಯವನ್ನು ತ್ಯಜಿಸಿ ಸಾತ್ವಿಕ ಜೀವನ ನಡೆಸಿದರು. ಒಡಹುಟ್ಟಿದವರು ಸಿನಿಮಾದಿಂದ ಅಣ್ಣ ತಮ್ಮಂದಿರ ಬಾಂಧವ್ಯ ಹೆಚ್ಚಾಗಿ ಒಂದಾಗಿ ಬಾಳುವಂಥ ಸನ್ನಿವೇಶಗಳು ರಾಜ್ಯಾದ್ಯಂತ ನಡೆದಿವೆ ಎಂದರು.

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ಮಾತನಾಡಿ, ಕಾಲೇಜಿನ ಸಮಯದಲ್ಲಿ ಡಾ. ರಾಜ್‌ಕುಮಾರ್ ಚಿತ್ರಗಳು ಬಂತೆAದರೆ ಎಲ್ಲಿಲ್ಲದ ಖುಷಿ. ಬಂಗಾರದ ಮನುಷ್ಯ, ಸಾಕ್ಷಾತ್ಕಾರ, ಸಂಪತ್ತಿಗೆ ಸವಾಲ್, ಎರಡು ಕನಸು, ದಾರಿತಪ್ಪಿದ ಮಗ ಚಿತ್ರಗಳು ಮನಸ್ಸಿಗೆ ಅತ್ಯಂತ ಪ್ರಿಯವಾದುದು ಎಂದು ಹೇಳಿದರು.

ತಹಶೀಲ್ದಾರ್ ರೇಷ್ಮಾ ಮಾತನಾಡಿ, ಕನ್ನಡಕ್ಕಾಗಿ ಜನಿಸಿ, ಕನ್ನಡಕ್ಕೆ ತಮ್ಮನ್ನು ತಾವು ಮುಡುಪಿಟ್ಟ ನಟ ಡಾ. ರಾಜ್‌ಕುಮಾರ್ ಅವಿಸ್ಮರಣೀಯ. ವಿಶಿಷ್ಟ ನಟನೆ, ಗಾಯನದ ಜೊತೆಗೆ ವೈಯಕ್ತಿಕವಾಗಿ ವಿಶಾಲತೆ, ವಿನಯ ಹಾಗೂ ಸಹೃದಯಿಯಾಗಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಡಿವೈಎಸ್ಪಿ ಶೈಲೇಂದ್ರ, ಕನ್ನಡಸೇನೆ ಆಟೋ ಕನ್ನಡ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಲಕ್ಷö್ಮಣ್, ಕಳವಾಸೆ ರವಿ, ಶಂಕರೇಗೌಡ, ಸತೀಶ್, ವಿನಯ್, ದೇವರಾಜ್, ಅನ್ವರ್, ಇಸ್ಮಾಯಿಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net