ಡಾ.ರಾಜ್ ಕುರಿತು ವಿಚಾರ ಸಂಕಿರಣ

Prakash Mehu
Published on

ಚಾಮರಾಜನಗರ: ಕರ್ನಾಟಕ ಸಾಹಿತ್ಯ ಅಕಾಡೆಮಿ, ರಂಗವಾಹಿನಿ ಸಂಸ್ಥೆ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ವರನಟ ಡಾ.ರಾಜ್‌ಕುಮಾರ್ ಕುರಿತು ನಮ್ಮೂರ ವರನಟ ವಿಚಾರ ಸಂಕಿರಣವನ್ನು ಏ.27 ರಂದು ಆಯೋಜಿಸಲಾಗಿದೆ ಎಂದು ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್ ಮೇಹು ಮಾಹಿತಿ ನೀಡಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 10.30 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಟ ಟಿ.ಎಸ್.ನಾಗಾಭರಣ ಉದ್ಘಾಟಿಸುವರು. ದೀನಬಂಧು ಸಂಸ್ಥೆ ಮುಖ್ಯಸ್ಥ ಪ್ರೊ.ಜಿ.ಎಸ್.ಜಯದೇವ್ ಅಧ್ಯಕ್ಷತೆ ವಹಿಸುವರು. ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಆಶಯನುಡಿಗಳನ್ನಾಡುವರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಗೋಷ್ಠಿಯಲ್ಲಿ ಡಾ.ರಾಜ್‌ಕುಮಾರ್ ಮತ್ತು ಕನ್ನಡ ಸಂವೇದನೆ ಕುರಿತು ಖ್ಯಾತ ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ವಿಚಾರ ಮಂಡಿಸುವರು. ಎರಡನೇ ಗೋಷ್ಠಿಯಲ್ಲಿ ಕರ್ನಾಟಕ ಗ್ರಾಮೀಣ ಬದುಕಿನ ಮೇಲೆ ಡಾ.ರಾಜ್ ಬೀರಿದ ಪ್ರಭಾವ ಕುರಿತು ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ ವಿಚಾರ ಮಂಡಿಸುವರು. ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ತಳ ಸಮುದಾಯಗಳ ಚಿತ್ರಣ ಕುರಿತು ಸಾಹಿತಿ ಡಾ.ಕೃಷ್ಣಮೂರ್ತಿ ಚಾಮರಂ ವಿಚಾರ ಮಂಡಿಸುವರು. ಡಾ.ರಾಜ್ ದನಿಯಲ್ಲಿ ಕನ್ನಡದ ಬನಿ ವಿಚಾರದ ಕುರಿತು ಖ್ಯಾತ ಚಲನಚಿತ್ರ ನಟ ಮಂಡ್ಯ ರಮೇಶ್ ವಿಚಾರ ಮಂಡಿಸುವರು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಪ್ರೊ.ಶಿವಸ್ವಾಮಿ, ಶಿವಕುಮಾರ್, ಸುರೇಶ್, ಸತೀಶ್ ಮದ್ದೂರು, ರವಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net