ಡಾ. ಮುನಿರಾಜು ನೇಮಕ

16 YERRISWAMY 03
Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ನೂತನ ಕುಲಪತಿಗಳಾಗಿ ಬೆಂಗಳೂರು ವಿವಿಯ ಡಾ. ಮುನಿರಾಜು ಅವರನ್ನು ನೇಮಿಸಿ ರಾಜ್ಯಪಾಲರು ಬುಧವಾರ ಆದೇಶ ಹೊರಡಿಸಿದ್ದಾರೆ. ಸದ್ಯ ಕುಲಪತಿ ಸ್ಥಾನಕ್ಕೆ ವಿವಿಯ ಡಾ. ಜೆ.ತಿಪ್ಪೇರುದ್ರಪ್ಪ ಅವರನ್ನು ಪ್ರಭಾರಿ ಕುಲಪತಿಗಳನ್ನಾಗಿ ನೇಮಿಸಿದ್ದರು. ಇದೀಗ ಬೆಂಗಳೂರು ವಿವಿಯ ಪ್ರಭಾರ ಕುಲಪತಿಯಾಗಿದ್ದ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರು, ನಿವೃತ್ತ ಪ್ರಾಧ್ಯಾಪಕರೂ ಆಗಿದ್ದ ಡಾ. ಎಂ.ಮುನಿರಾಜು ಅವರನ್ನು ವಿಎಸ್ ಕೆ ವಿವಿಯ ನೂತನ ಕುಲಪತಿಗಳನ್ನಾಗಿ ನೇಮಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net