ಡಾ.ಮಲ್ಲಣ್ಣಪ್ಪ ಶ್ರೀಗಳ ಜನ್ಮದಿನ 19ಕ್ಕೆ

klb2
Published on

ಶಹಾಬಾದ್: ತೊನಸನಳ್ಳಿ (ಎಸ್) ಗ್ರಾಮದಲ್ಲಿ ಅಲ್ಲಮಪ್ರಭು ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮಿಗಳ 63ನೇ ಜನ್ಮದಿನ, ಜೀವನ ಚರಿತ್ರೆ ಗ್ರಂಥ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಅ.19ರಂದು ಮಧ್ಯಾಹ್ನ 12.30ಕ್ಕೆ ಆಯೋಜಿಸಲಾಗಿದೆ ಎಂದು ಶ್ರೀಮಠದ ಬಸವರಾಜ ಮದ್ರಕಿ ತಿಳಿಸಿದರು.

ಶ್ರೀ ಪ್ರಭು ದೇವರು, ಶ್ರೀ ಡಾ.ಸೌರಭ ಸ್ವಾಮೀಜಿ ನೇತೃತ್ವ, ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯ, ಪೇಠಶಿರೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸೂಗೂರ (ಕೆ)ನ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯ, ನೂಲ ಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

`ಜ್ಞಾನಯೋಗಿ' ಗ್ರಂಥವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಬಸವರಾಜ ಮತ್ತಿಮಡು ಬಿಡುಗಡೆಗೊಳಿಸುವರು. ಶಾಸಕರಾದ ಡಾ.ಬಿ.ಜಿ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ಅಮರನಾಥ ಪಾಟೀಲ್, ಪ್ರಮುಖರಾದ ಮಾಲಾ ನಾರಾಯಣರಾವ, ದೇವಿಂದ್ರಪ್ಪ ಮರತೂರ, ಡಾ.ಎಂ.ಎ.ರಶೀದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

ನಿಂಗಣ್ಣಗೌಡ ಮಾಲಿಪಾಟೀಲ್, ನಿಂಗಣ್ಣ ಹುಳಗೋಳ, ಮಹಾದೇವ ಬಂದಳ್ಳಿ, ಭೀಮಯ್ಯ ಗುತ್ತೇದಾರ್, ಮಹಾಲಿಂಗ ಮದ್ರಕಿ ಉಪಸ್ಥಿತರಿದ್ದರು.

ಸಾಧಕರಿಗೆ ಪ್ರಶಸ್ತಿ: ದತ್ತಾತ್ರೇಯ ವಿಶ್ವಕರ್ಮ (ಸಾಹಿತ್ಯ ವಿಭೂಷಣ), ರಾಜಗೋಪಾಲ ರೆಡ್ಡಿ, ಸೂರ್ಯಕಾಂತ ಪುಲಾರೆ, ಮಡಿವಾಳಪ್ಪ ನರಬೋಳಿ, ಮಹಾದೇವ ಬಂದಳ್ಳಿ, ಗುರುನಾಥ ಗುದ್ಗಲ್, ದೇವಿಂದ್ರ ತಳವಾರ, ಅಕ್ಕನಾಗಮ್ಮ, ಆಶಾಲತಾ ಬಿರಾದಾರ, ಮೀನಾಕ್ಷಿ ಯಾಕಾಪುರ, ರೇಣುಕಾ ಕೋಟಾಗಸ್ತಿ, ರಾಜಕುಮಾರ, ರಾಮಲಿಂಗಪ್ಪ ಹೊಸೂರ, ನಾಗೇಂದ್ರ ಜೈಗಂಗಾ, ಸಿದ್ದಲಿಂಗೇಶ್ವರ ಸಿರಗೂಂಡ, ಸಂತೋಷಕುಮಾರ ಹಬ್ಬಳ್ಳಿ, ಗುರಪ್ಪ ನಾಟೀಕಾರ, ಮಲ್ಲಮ್ಮ ಮದ್ರಕಿ, ಶಾರದಾ ದೇವಿಂದ್ರ (ಸಮಾಜ ಸೇವಾ ರತ್ನ) ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಗುತ್ತಿದೆ ಎಂದು ಬಸವರಾಜ ಮದ್ರಕಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net