

ಬೀದರ್: ಬೇಸಿಗೆ ಬಿಸಿಲು ಲೆಕ್ಕಿಸದೆ ತಾಲೂಕಿನ ಆಣದೂರು ಗ್ರಾಮದ ಜನ ಬಿಜೆಪಿ ಮುಖಂಡ ಡಾ.ಶೈಲೇಂದ್ರ ಬೆಲ್ದಾಳೆ ಗೆಲುವಿಗಾಗಿ 15 ಕಿಮೀ ಪಾದಯಾತ್ರೆ ನಡೆಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಮಹಿಳೆಯರು, ಯುವಕರು ಪಾದಯಾತ್ರೆ ನಡೆಸಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಅವರಿಗೆ ಬಿಜೆಪಿ ಟಿಕೆಟ್ ದೊರಕಿ ಅವರು ಭರ್ಜರಿ ಜಯ ಸಾಸಬೇಕು ಎಂದು ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನ ಮತ್ತು ಗಾಯಮುಖ ಮಂದಿರಕ್ಕೆ ಪಾದಯಾತ್ರೆ ಮೂಲಕ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬೆಲ್ದಾಳೆ ಅವರು ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಜನಸೇವೆಯಲ್ಲಿದ್ದಾರೆ. ಕೆಎಸ್ಐಐಡಿಸಿ ಅಧ್ಯಕ್ಷ ಸ್ಥಾನ ಸಮರ್ಥವಾಗಿ ನಿಭಾಯಿಸಿ ಕರೊನಾ ಸಂಕಷ್ಟದಲ್ಲಿ ಬಡ ಜನರ ನೆರವಿಗೆ ಬಂದರು. ನಿರಂತರ ಸಾಮಾಜಿಕ ಕೆಲಸ ಮಾಡಿ ಜನರ ಮನ ಗೆದ್ದಿದ್ದಾರೆ. ಅವರಿಗೆ ದೇವರ ಆಶೀರ್ವಾದ ಇರಲಿ ಎಂದು ಬೇಡಿಕೊಂಡರು.