

ಹನೂರು: ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಜಿ. ದೊಡ್ಡಿಯಲ್ಲಿ ಬುಧವಾರ ಇದೇ ಮೊದಲ ಬಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಯಜಮಾನರನ್ನು ನೇಮಕ ಮಾಡಲಾಯಿತು.
ಗ್ರಾಮದ ಸಮುದಾಯದ ಜನರು ಯಜಮಾನರಾಗಿ ಪುಟ್ಟಸ್ವಾಮಿ ಹಾಗೂ ಮಾದೇವ ಅವರನ್ನು ನೇಮಕ ಮಾಡಿದರೆ, ಸಂಘದ ಗೌರವಾಧ್ಯಕ್ಷರಾಗಿ ಎಂ. ಮಹೇಶ್, ಅಧ್ಯಕ್ಷರಾಗಿ ಎಸ್.ಲಿಂಗರಾಜು, ಉಪಾಧ್ಯಕ್ಷ ಎಂ.ಮಂಜು, ಪ್ರಧಾನ ಕಾರ್ಯದರ್ಶಿ ಎಂ. ವಿಶಾಲ್, ಕಾರ್ಯದರ್ಶಿ ಎಂ. ನಾಗೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸಂಜಯ್, ಖಜಾಂಚಿ ಸೋಮಣ್ಣ, ನಿರ್ದೇಶಕರಾಗಿ ಕಿರಣ್‌ಕುಮಾರ್, ಸಿದ್ದರಾಜು, ಅನಿಲ್‌ಕುಮಾರ್, ಮಹದೇವಸ್ವಾಮಿ, ಮಾದೇವ ಹಾಗೂ ಸದಸ್ಯರಾಗಿ ಸಿದ್ದಯ್ಯ, ಪುಟ್ಟಸ್ವಾಮಿ, ಮಹಾದೇವಪ್ರಸಾದ್, ದೊಡ್ಡಮಾದ, ಸಿದ್ದರಾಜು, ಸಿದ್ದಯ್ಯ ಅವರನ್ನು ನೇಮಕ ಮಾಡಲಾಯಿತು.