ಡಾ.ಬಾಬು ಜಗಜೀವನ್ ರಾಂ ಕ್ಷೆಮಾಭಿವೃದ್ಧಿ ಸಂಘ ಉದ್ಘಾಟನೆ

ಡಾ.ಬಾಬು ಜಗಜೀವನ್ ರಾಂ ಕ್ಷೆಮಾಭಿವೃದ್ಧಿ ಸಂಘ ಉದ್ಘಾಟನೆ
Published on

ಅರಸೀಕೆರೆ: ದೇಶ ಕಂಡ ಹಿರಿಯ ಮುತ್ಸದ್ದಿ ರಾಜಕಾರಣಿ ಡಾ.ಬಾಬು ಜಗಜೀವನ್ ರಾಂ ಚಿಂತನೆ, ತತ್ವದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.

ತಾಲೂಕಿನ ಗಂಡಸಿ ಹೋಬಳಿ ರಂಗಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಂ ಕ್ಷೆಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದರು. ಶೋಷಿತರ ದನಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ಬಾಬೂಜೀ ಉಪ ಪ್ರಧಾನಿಯಾಗಿ ನೀಡಿದ ರೈತರು,ಕಾರ್ಮಿಕರು ಸೇರಿ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ.ಇಂತಹ ಧೀಮಂತಹ ನಾಯಕನ ಸವಿ ನೆನಪಿನಲ್ಲಿ ಸಂಘ ಆರಂಭಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಸಾರ್ಥಕತೆ ದೊರೆಯಲಿದ್ದು ಎಲ್ಲರೂ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ ಗ್ರಾಮದ ಮುಖಂಡರು ಅದ್ದೂರಿ ಮೆರವಣಿಗೆ ಮೂಲಕ ಕರೆದೊಯ್ದು ಸಂತೋಷ್‌ರಿಂದ 2023ರ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿಸಿದರು.


ಮತ್ತೋರ್ವ ಮುಖಂಡ ಕೊಂಡೇನಾಳು ಪ್ರಸನ್ನ ಮಾತನಾಡಿ,ಸದಾ ದಲಿತರು ಹಾಗೂ ಶೋಷಿತರ ಹಿತಚಿಂತನೆಯಲ್ಲಿ ತೊಡಗಿರುವ ಯುವ ನಾಯಕ ನಮಗೆ ದೊರೆತಿದ್ದು ಎಲ್ಲರೂ ಒಗ್ಗೂಡಿ ಸಮುದಾಯದ ಸೇವೆಗೆ ಬಳಸಿಕೊಳ್ಳೋಣ ಎಂದರು.ನಗರಸಭೆ ಅಧ್ಯಕ್ಷ ಸಿ.ಗಿರೀಶ್,ಮುಖಂಡರಾದ ಲೋಕೇಶ್,ರಾಜೇಂದ್ರ, ಶಶಿಧರ್ ,ದೊಡ್ಡಟ್ಟಿ ಗೌರಮ್ಮ ಸೇರಿ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net