

ಅಥಣಿ: ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮೂಲಕ ನಾಡಿನ ಜನತೆಗೆ ಉತ್ತಮ ಸೇವೆ ಒದಗಿಸುತ್ತಿರುವ ಡಾ. ಪ್ರಭಾಕರ ಕೋರೆ ಅವರ ಸೇವೆ ಅನುಪಮ ಎಂದು ದರೂರ ಗ್ರಾಮದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಸಿದ್ದಗೊಂಡ ಗುಮತಾಜ ಹೇಳಿದರು.
ಸಮೀಪದ ಸಂಕ್ರಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ೭೮ನೇ ಜನ್ಮದಿನದ ನಿಮಿತ್ತ ದರೂರ ಗ್ರಾಮದ ಡಾ.ಪ್ರಭಾಕರ ಕೋರೆ ಸೊಸೈಟಿ ವತಿಯಿಂದ ಶುಕ್ರವಾರ ಸಿಹಿ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು. ಎಲ್ಲ ರಂಗಗಳಲ್ಲೂ ಸೇವಾಕ್ಷೇತ್ರ ವಿಸ್ತರಿಸುವ ಮೂಲಕ ನಮಗೆಲ್ಲ ದಾರಿದೀಪವಾಗಿದ್ದಾರೆ. ಇವರಿಂದ ಸಾವಿರಾರು ಜನರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಸದಸ್ಯರಾದ ಪರಗೌಡ ಪಾಟೀಲ, ಬಸವರಾಜ ಮಠದ, ಶಿವಗೌಡ ಬಸಗೌಡರ, ಮಲ್ಲಪ್ಪ ಚೌಗಲಾ, ಬ್ರಹ್ಮಕುಮಾರ ಮದಭಾವಿ, ತಿಪ್ಪಣ್ಣ ಅಥಣಿ, ಮಹಾದೇವ ಜಾಬಗೌಡರ, ಪ್ರಕಾಶ ಪಾಟೀಲ, ರಮೇಶ ಪಾಟೀಲ, ಜಿನ್ನಪ್ಪ ಹೊಸೂರ, ಅಮಿತ್ ಗೌಡಪ್ಪನವರ, ಶಾಖಾ ವ್ಯವಸ್ಥಾಪಕ ಸುರೇಶ ಕಬಾಡಗಿ ಹಾಗೂ ಇತರರು ಇದ್ದರು.