ಡಾ. ಪಿ.ಜಿ ಕೆಂಪಣ್ಣನವರ ಅವಲೋಕನ ಕೃತಿ ಲೋಕಾರ್ಪಣೆ

Rllc Photo
Published on

ಬೆಳಗಾವಿ: ಇತ್ತೀಚೆಗೆ ನಗರದ ಕೆಎಲ್ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ರಿಯಾ ಪ್ರಕಾಶನದ ಅವಲೋಕನ ಕೃತಿ ಲೋಕಾರ್ಪಣೆ ಮಾಡಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಎ ಎಚ್ ಹವಲ್ದಾರ್ ಮಾತನಾಡಿ ಅವಲೋಕನದಂತಹ ಕೃತಿ ನಾಡು-ನುಡಿಯ ಬೆಳವಣಿಗೆಗೆ  ಪೂರಕವಾಗಿ ನಿಲ್ಲಲು ಸಾಧ್ಯ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೃತಿ ಲೇಖಕ ಡಾ. ಪಿ ಜಿ ಕೆಂಪಣ್ಣನವರ್ ಮಾತನಾಡಿ ಕನ್ನಡ ನಾಡು ನುಡಿ ಸಂಸ್ಕೃತಿಯ ಕುರಿತು ಮಂಡಿಸಿದ ಅನೇಕ ಪ್ರಬಂಧಗಳ ಸಂಕಲನವೇ ಅವಲೋಕನ, ಇದು ಕಾನೂನು ವಿದ್ಯಾರ್ಥಿಗಳ ಭಾಷಾ ಅಭಿವೃದ್ಧಿಗೆ ಪೂರಕವಾಗಬಲ್ಲದು ಎಂದು ಆಶಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net