ಡಾ.ಪಟ್ಟದ್ದೇವರ ಪ್ರಶಸ್ತಿಗೆ ಬಾವುಗೆ ಆಯ್ಕೆ

Captureq1
Published on

ಭಾಲ್ಕಿ: ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಸಾಹಿತ್ಯ ಪ್ರಶಸ್ತಿ-2022ಗೆ ಹಿರಿಯ ಸಾಹಿತಿ ವೀರಶೆಟ್ಟಿ ಬಾವುಗೆ ಆಯ್ಕೆ ಆಗಿದ್ದಾರೆ. ವೀರಶೆಟ್ಟಿ ಬಾವುಗೆ ಅವರು ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಮತ್ತು ಶರಣ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಕವನ ಸಂಕಲನ, ಸಂಪಾದನೆ, ಜೀವನ ಚರಿತ್ರೆ, ಆಧುನಿಕ ವಚನಗಳು ಹೀಗೆ ವಿವಿಧ ಸಾಹಿತ್ಯ ರಂಗದಲ್ಲಿ ಇವರ ಸೇವೆ ಅನುಪಮವಾಗಿದೆ. ಇಲ್ಲಿಯವರೆಗೆ ಸುಮಾರು 25 ಕೃತಿಗಳನ್ನು ಬರೆದಿದ್ದಾರೆ. ನಡೆ-ನುಡಿ ಒಂದಾಗಿಸಿಕೊಂಡಿರುವ ಬಾವುಗೆ ಅವರು ವ್ಯಕ್ತಿಗತ ಜೀವನವನ್ನು ಶರಣ ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ಅವರ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ನಾಡಿನ ಅನೇಕ ಪ್ರತಿಷ್ಠಿತ ಮಠಮಾನ್ಯಗಳಿಂದ ಹಾಗೂ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಗಳು ಬಂದಿವೆ. ಅವರ ಸಮಗ್ರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಮಕ್ತುಂಬಿ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net