

ಮೈಸೂರು: ವಿದ್ವಾಂಸರಾಗಿದ್ದ ಡಾ.ಕೆ.ಎಸ್. ನಾರಾಯಣಾಚಾರ್ಯರು ಸ್ವಅಧ್ಯಯನ ಮತ್ತು ಪ್ರವಚನದ ಕಲಾ ತಪಸ್ವಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ಸನಾತನ ಸಭಾ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ನಗರದ ಆಯೋಜಿಸಲಾಗಿದ್ದ ವಿದ್ವಾನ್ ಡಾ.ಕೆ.ಎಸ್.ನಾರಾಯಣಾಚಾರ್ಯರ ಕೃತಿಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವಿದ್ವಾಂಸರಾಗಿದ್ದ ಪಂಡಿತ್ ಡಾ.ಕೆ.ಎಸ್.ನಾರಾಯಣಾಚಾರ್ಯರು ಪ್ರಾಚೀನ ಸಂಸ್ಕೃತಿಯನ್ನು ಕರಗತ ಮಾಡಿಕೊಂಡಿದ್ದ ವಿದ್ವಾಂಸರ ಪೈಕಿ ಒಬ್ಬರಾಗಿದ್ದರು. ಅವರು ಆಕಾರದಲ್ಲಿ ಎಷ್ಟು ಎತ್ತರದಲ್ಲಿ ಬೆಳೆದಿದ್ದರೋ ವಿದ್ವತ್ತಿನಲ್ಲೂ ಅಷ್ಟೇ ದೊಡ್ಡ ಗಾತ್ರ ಹೊಂದಿದ್ದರು. ಅವರು ಪಾಂಡಿತ್ಯದೊಂದಿಗೆ ಅಪಾರ ರಾಷ್ಟ್ರಭಕ್ತಿಯನ್ನೂ ಮೈಗೂಡಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಹಿರಿಯ ಸಂಶೋಧಕ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ವಕೀಲ ಓಂ ಶ್ಯಾಮ್‌ಭಟ್, ಉದ್ಯಮಿ ಎಂ.ಜಗನ್ನಾಥ ಶಣೈ, ಪ್ರೊ.ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಅಧ್ಯಕ್ಷ ಜಿ.ಎಲ್.ಶೇಖರ್, ಸನಾತನ ಸಭಾ ಅಧ್ಯಕ್ಷ ದ್ವಾರಕಾನಾಥ್, ಉಪಾಧ್ಯಕ್ಷ ರಾಮಪ್ರಸಾದ್, ಕಾರ್ಯದರ್ಶಿ ಗ.ನಾ.ಭಟ್ ಉಪಸ್ಥಿತರಿದ್ದರು.